ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸತ್ಯಂ ರಾಜುಗೆ ಜಾಮೀನು ಇಲ್ಲ

By Mrutyunjaya Kalmat
|
Google Oneindia Kannada News

Ramalinga Raju
ನವದೆಹಲಿ, ಮಾ. 15 : ಸತ್ಯಂ ಕಂಪನಿ ಮಾಜಿ ಮುಖ್ಯಸ್ಥ ಗೋಲ್ ಮಾಲ್ ರಾಮಲಿಂಗರಾಜು ಅವರಿಗೆ ಜಾಮೀನು ನೀಡಲು ಸುಪ್ರಿಂಕೋರ್ಟ್ ನಿರಾಕರಿಸಿದೆ. ಕಂಪನಿಗೆ ಸಂಬಂಧಿಸಿದ ಸಾವಿರಾರು ಕೋಟಿ ರುಪಾಯಿಗಳ ಅವ್ಯವಹಾರ ಮಾಡಿರುವ ರಾಜು ಜೈಲಿನಲ್ಲಿರುವುದು ಸೂಕ್ತ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಕೆಜಿ ಬಾಲಕೃಷ್ಣನ್ ನೇತೃತ್ವದ ನ್ಯಾ. ದೀಪಕ್ ವರ್ಮಾ ಮತ್ತು ಬಿಎಸ್ ಚೌಹಾನ್ ಅವರನ್ನು ಒಳಗೊಂಡ ಪೀಠ ರಾಮಲಿಂಗರಾಜು ಅವರಿಗೆ ನಿರಾಕರಿಸಿದೆ. ಸತ್ಯಂ ತಂತ್ರಜ್ಞಾನ ಕ್ಷೇತ್ರದ ಪ್ರತಿಷ್ಠಿತ ಕಂಪನಿಯಾಗಿತ್ತು. ಆದರೆ, ಅದರ ಮುಖ್ಯಸ್ಥರಾಗಿದ್ದ ರಾಮಲಿಂಗರಾಜು ಕಂಪನಿ ಅಪಾರ ಹಣವನ್ನು ಅವ್ಯವಹಾರ ಮಾಡಿದ್ದಾರೆ. ಅವರಿಂದ ಒಂದು ಕ್ಷೇತ್ರಕ್ಕೆ ತುಂಬಲಾರದ ಹಾನಿಯಾಗಿದೆ. ಹೀಗಿರುವಾಗ ಇಂತವರು ಜೈಲಿನಲ್ಲಿರಬೇಕು ಎಂಬದು ಜನರ ಅಶಯವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ರಾಮಲಿಂಗರಾಜು ಆರೋಗ್ಯ ತೊಂದರೆಯಿಂದ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಹೃದಯರೋಗದಿಂದ ಅವರು ಬಳಲುತ್ತಿದ್ದಾರೆ. ರಾಜು ವಿರುದ್ಧ ಸಿಬಿಐ ಚಾರ್ಜ್ ಸೀಟ್ ಸಲ್ಲಿಸಿದೆ. 2009ರ ಜನವರಿಯೆಂದು ರಾಜು ಹಗರಣ ಬಯಲಿಗೆ ಬಂದಿತ್ತು. ಆಗ ಅವರನ್ನು ಬಂಧಿಸಿ ಜೈಲಿನಲ್ಲಿಡಲಾಗಿದೆ. 7 ಸಾವಿರ ಕೋಟಿ ರುಪಾಯಿಗಳಿಗೂ ಹೆಚ್ಚು ಹಣದ ಅವ್ಯವಹಾರದಲ್ಲಿ ರಾಜು ಪ್ರಮುಖ ಆರೋಪಿಯಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X