ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನಪೀಠ ಪ್ರಶಸ್ತಿ ಕೃತಿಗಳು ಬ್ರೈಲ್ ಲಿಪಿಗೆ

By Mahesh
|
Google Oneindia Kannada News

ಬೆಂಗಳೂರು, ಮಾ.15: ಬ್ರೈಲ್ ಲಿಪಿ ಮೂಲಕ ನಾಡಿನ ಏಳು ಜ್ಞಾನಪೀಠ ಪ್ರಶಸ್ತಿ ವಿಜೇತರ ಕನ್ನಡದ ಕೃತಿಗಳನ್ನು ಇನ್ನು ಮುಂದೆ ದೃಷ್ಟಿಹೀನರೂ ಓದಲು ಅವಕಾಶವಿದೆ. ಮಹಾಕವಿ ಕುವೆಂಪು ಅವರ ರಾಮಾಯಣ ದರ್ಶನಂ, ವರಕವಿ ದ.ರಾ. ಬೇಂದ್ರೆ ಅವರ ನಾಕುತಂತಿ, ಖ್ಯಾತ ಸಾಹಿತಿಗಳಾದ ಡಾ.ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಹಾಗೂ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ಚಿಕವೀರ ರಾಜೇಂದ್ರ, ವಿನಾಯಕ ಕೃಷ್ಣ ಗೋಕಾಕ್ ಅವರ ಭಾರತಸಿಂಧು ರಶ್ಮಿ , ಗಿರೀಶ್ ಕಾರ್ನಾಡ್ ಹಾಗೂ ಪ್ರೊ. ಯು.ಆರ್ ಅನಂತಮೂರ್ತಿ ಆವರ ಸಮಗ್ರ ಸಾಹಿತ್ಯ ಇನ್ನೊಂದು ತಿಂಗಳಲ್ಲಿ ಬ್ರೈಲ್ ಲಿಪಿಯ ರೂಪ ಪಡೆದುಕೊಳ್ಳಲಿದೆ.

ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಎಸ್.ಜಿ.ಹೊಂಡದಕೇರಿ ಶನಿವಾರ ಈ ವಿಷಯ ತಿಳಿಸಿದರು. ಕರ್ನಾಟಕ ಅಂಧರ ವಿಮೋಚನಾ ವೇದಿಕೆಯ ಸಮಾರಂಭದಲ್ಲಿ ಮಾತನಾಡಿದ ಅವರು, ಅಂಧರಿಗೆ ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೃತಿಗಳನ್ನು ಓದುವ ಭಾಗ್ಯ ಕಲ್ಪಿಸಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.ಅಂಧರ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಬ್ರೈಲ್‌ಲಿಪಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳನ್ನು ಇನ್ನಷ್ಟು ಉನ್ನತೀಕರಣಗೊಳಿಸುವ ಯೋಜನೆ ಇದೆ ಎಂದು ಅವರು ವಿವರಿಸಿದರು.

ಜಾಣಗೆರೆ ಆರೋಪ: ಸರ್ಕಾರೇತರ ಸಂಘಟನೆ(ಎನ್ ಜಿಒ)ಗಳು ಅಂಧರ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಲೂಟಿ ಮಾಡುತ್ತಿವೆ ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಆರೋಪಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಳ್ಳವರ ಪ್ರತಿಭೆಯನ್ನು ಮಾತ್ರ ಪ್ರೋತ್ಸಾಹಿಸುತ್ತಿದೆ. ಆದರೆ ಅಂಧರ ಬಗ್ಗೆ ಕಿಂಚಿತ್ತೂ ಗಮನ ಹರಿಸುತ್ತಿಲ್ಲ. ಇದೇ ವೇಳೆ ಸರ್ಕಾರ ಹಾಗೂ ಸಂಸ್ಥೆಗಳೂ ಅಂಧರ ಪ್ರತಿಭೆಗೆ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತಿಲ್ಲ. ಅಂಧರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿದಲ್ಲಿ ಅವರು ಮುಖ್ಯವಾಹಿನಿಗೆ ಬರುವುದು ಸುಲಭವಾಗುತ್ತಿತ್ತು ಎಂದು ವೆಂಕಟರಾಮಯ್ಯ ವಿಷಾದಿಸಿದರು.

ಬೇರೆ ಇಂದ್ರಿಯ ಶಕ್ತಿ:
ಅಂಧರಿಗೆ ದೃಷ್ಟಿ ಇಲ್ಲದಿದ್ದರೂ ಅವರಿಗೆ ಬೇರೆ ಇಂದ್ರಿಯಗಳ ಶಕ್ತಿ ಇರುತ್ತದೆ. ಹೀಗಾಗಿ ಅಂಧರು ತಮ್ಮ ಪ್ರತಿಭೆಯನ್ನು ತಾವೇ ಗುರುತಿಸಿಕೊಳ್ಳಬೇಕು. ಇದಾದಲ್ಲಿ ಅವರು ಇತರರಿಗಿಂತ ಹೆಚ್ಚಿನ ಸಾಧನೆ ಮಾಡಬಹುದು ಎಂದು ಕವಿ ಪ್ರೊ. ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ವೇದಿಕೆ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಗವಾರ ಮೊದಲಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X