ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲ ಪಂದ್ಯದಲ್ಲಿ ಗಂಗೂಲಿಗೆ ಬೇವು ಬೆಲ್ಲ

By Prasad
|
Google Oneindia Kannada News

Kolkata Night Riders captain Saurav Ganguly
ಮುಂಬೈ, ಮಾ. 13 : ಇಂಡಿಯನ್ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ಗೆಲುವಿನ ಸಿಹಿ ಉಂಡಿದ್ದರೂ ಅದರ ನಾಯಕ ಸೌರವ್ ಗಂಗೂಲಿ ದಂಡ ತೆತ್ತು ಕಹಿಯನ್ನು ಉಂಡಿದ್ದಾರೆ. ಮೊದಲ ಪಂದ್ಯದಲ್ಲಿಯೇ ಗಂಗೂಲಿ ಬೇವು ಬೆಲ್ಲ ಸವಿದಂತಾಗಿದೆ.

ಕಳೆದ ಬಾರಿಯ ಚಾಂಪಿಯನ್ ಡೆಕ್ಕನ್ ಚಾರ್ಜರ್ಸ್ ತಂಡವನ್ನು 11 ರನ್ ಗಳಿಂದ ನೈಟ್ ರೈಡರ್ಸ್ ಸದೆಬಡಿದರೂ ನಿಧಾನಗತಿಯ ಬೌಲಿಂಗ್ ನಿಂದಾಗಿ ನಾಯಕ ಸೌರವ್ ಗಂಗೂಲಿ 20 ಸಾವಿರ ಡಾಲರ್ ದಂಡ ತೆತ್ತಬೇಕಾಯಿತು. ಪಂದ್ಯ ಮುಗಿದಾಗ ನಿಗದಿತ ಅವಧಿಯಲ್ಲಿ ಕೊಲ್ಕತಾ ನೈಟ್ ರೈಡರ್ಸ್ ಮೂರು ಓವರ್ ಕಡಿಮೆ ಎಸೆದಿತ್ತು. ಐಪಿಎಲ್ ನ ನಿಯಮಗಳ ಪ್ರಕಾರ ಮ್ಯಾಚ್ ರೆಫರಿ ಜಿಂಬಾಬ್ವೆಯ ಪೈಕ್ರಾಫ್ಟ್ ಅವರು ಸೌರವ್ ಗಂಗೂಲಿ ಅವರಿಗೆ ದಂಡ ವಿಧಿಸಿದ್ದಾರೆ.

ಎರಡನೇ ಆವೃತ್ತಿಯಲ್ಲಿ ನಾಯಕತ್ವ ಕುರಿತಂತೆ ವಿವಾದಕ್ಕೆ ಸಿಲುಕಿದ್ದ ಸೌರವ್ ಗಂಗೂಲಿ ಅವರಿಗೆ ಮೂರನೇ ಆವೃತ್ತಿಯ ಪ್ರಥಮ ಪಂದ್ಯದಲ್ಲಿ ಬ್ಯಾಟಿಂಗಿನಲ್ಲಿಯೂ ಮುಗ್ಗರಿಸಿದರು. ಮೊದಲ ಓವರಿನಲ್ಲಿಯೇ ಯಾವುದೇ ಖಾತೆ ತೆರೆಯದೇ ವಿಕೆಟ್ ಒಪ್ಪಿಸಿ ಪೆವಿಲಿಯನ್ ಗೆ ನಡೆದಿದ್ದರು. ರನ್ ಗಳಿಸದಿರುವ ಗಾಯದ ಮೇಲೆ ಉಪ್ಪು ಸುರಿದಂತೆ ದಂಡ ಕೂಡ ವಿಧಿಸಲಾಗಿದೆ.

ಮೊದಲು ಬ್ಯಾಟ್ ಮಾಡಿದ್ದ ನೈಟ್ ರೈಡರ್ಸ್ ತಂಡ 20 ಓವರುಗಳಲ್ಲಿ, ಓವೈಸ್ ಷಾ(ಅಜೇಯ 58) ಮತ್ತು ಮ್ಯಾಥ್ಯೂಸ್(ಅಜೇಯ 65) ಅವರ ಅದ್ಭುತ ಬ್ಯಾಟಿಂಗಿನಿಂದ ಚೇತರಿಸಿಕೊಂಡು 161 ರನ್ ಗಳಿಸಿತ್ತು. ಅದನ್ನು ಬೆಂಬತ್ತಿದ ಡೆಕ್ಕನ್ ಚಾರ್ಜರ್ಸ್, ನಾಯಕ ಗಿಲ್ ಕ್ರಿಸ್ಟ್ ಅವರ ಅರ್ಧಶತಕದ ಹೊರತಾಗಿಯೂ ಗೆಲ್ಲಲು ಸಾಧ್ಯವಾಗಲಿಲ್ಲ. ನಿಗದಿತ 20 ಓವರುಗಳಲ್ಲಿ ಕೇವಲ 150 ರನ್ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X