ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರ ದತ್ತಪೀಠ ದೇವಾಲಯ ಜೀರ್ಣೋದ್ಧಾರ: ರವಿ

By Rajendra
|
Google Oneindia Kannada News

Datta Peetha cave repair work soon
ಬೆಂಗಳೂರು, ಮಾ.13: ಬಾಬಾಬುಡನ್ ಗಿರಿ/ ದತ್ತಪೀಠದ ಗುಹಾಂತರ ದೇವಾಲಯ ಜೀರ್ಣೋದ್ಧಾರ ಕೆಲಸಕ್ಕೆ ಸುಪ್ರೀಂಕೋರ್ಟ್ ನೀಡಿದ್ದ ತಡೆಯಾಜ್ಞೆ ತೆರವಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೆ ಗುಹಾಂತರ ದೇವಾಲಯದ ಜೀರ್ಣೋದ್ಧಾರ ಕಾರ್ಯ ಆರಂಭವಾಗಲಿದೆ ಎಂದು ಭಾರತೀಯ ಜನತಾ ಪಕ್ಷದ ವಕ್ತಾರ ಹಾಗೂ ಶಾಸಕ ಸಿಟಿ ರವಿ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ರಾಜ್ಯ ಸರಕಾರದ ಪುರಾತತ್ವ ಇಲಾಖೆಯ ಮಾರ್ಗದರ್ಶನದಲ್ಲಿ ಮೂಲ ದೇವಾಲಯಕ್ಕೆ ಧಕ್ಕೆಯಾಗದ ರೀತಿಯಲ್ಲಿ ದೇವಾಲಯ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳಬಹುದು ಎಂದು ಸುಪ್ರೀಂಕೋರ್ಟ್ ಸೂಚನೆ ನೀಡಿದೆ ಎಂದು ತಿಳಿಸಿದರು.

2008ರಲ್ಲಿ ಬಿದ್ದ ಭಾರಿ ಮಳೆಗೆ ದೇವಾಲಯ ಶಿಥಿಲಗೊಂಡಿತ್ತು. ಆಲಯದ ಜೀರ್ಣೋದ್ಧಾರ ಕೆಲಸಕ್ಕೆ ಮುಜರಾಯಿ ಇಲಾಖೆ ರು.5 ಕೋಟಿ ಬಿಡುಗಡೆ ಮಾಡಿದೆ. ಬಾಬಾಬುಡನ್ ಗಿರಿಯನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಸಚಿವ ಜಿ ಜನಾರ್ಧನರೆಡ್ಡಿ ರು.5 ಕೋಟಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ. 2013ಕ್ಕ್ಕೆ ಆಲಯ ಜೀರ್ಣೋದ್ಧಾರ ಮುಗಿಯಲಿದೆ ಎಂದು ರವಿ ವಿವರ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X