ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸದನದಲ್ಲಿ ಯಾದವರ ವ್ಯರ್ಥ ಕದನ

By Mrutyunjaya Kalmat
|
Google Oneindia Kannada News

Lalu Mulayam Singh Yadav
ನವದೆಹಲಿ, ಮಾ. 11 : ವಿರೋಧದ ನಡುವೆ ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ಪಡೆದ ಸರಕಾರದ ಕ್ರಮ ಖಂಡಿಸಿ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಲು ಚಿಂತನೆ ನಡೆಸಿದ್ದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಎಸ್ಪಿ ಮುಖಂಡ ಮುಲಾಯಂಸಿಂಗ್ ಯಾದವ್ ಬುಧವಾರ ಸಂಖ್ಯಾಬಲದ ಕೊರತೆ ನೆಪವೂಡ್ಡಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.

ಮೇಲ್ಮನೆಯಲ್ಲಿ ಪಕ್ಷ ಸದಸ್ಯರನ್ನು ಮಾರ್ಷಲ್ ಮೂಲಕ ಹೊರಹಾಕಿದ್ದರಿಂದ ಯಾದವದ್ವಯರು ಅಸಮಾಧಾನಗೊಂಡಿದ್ದರು. ಸರಕಾರಕ್ಕೆ ಬೆಂಬಲ ಹಿಂತೆಗೆದುಕೊಂಡ ಬೆನ್ನಲ್ಲೇ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿ ಹೇಳಿದ್ದರು. ಸಂವಿಧಾನದ ನಿಯಮಗಳ ಪ್ರಕಾರ ಅವಿಶ್ವಾಸ ಗೊತ್ತುವಳಿಗೆ ಕನಿಷ್ಠ 50 ಸದಸ್ಯರು ಸಹಿ ಹಾಕಬೇಕು. ಪ್ರಸ್ತುತ ಆರ್ ಜೆಡಿ ಹಾಗೂ ಎಸ್ಪಿ ಅಷ್ಟು ಸಂಖ್ಯಾಬಲ ಹೊಂದಿಲ್ಲ. ಇತರ ಪಕ್ಷಗಳಿಂದಲೂ ಬೆಂಬಲ ದೊರಕುವ ನಿರೀಕ್ಷೆ ಇಲ್ಲ. ಯುಪಿಎ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಕಾಲ ಇನ್ನೂ ಪಕ್ವವಾಗಿಲ್ಲ ಎಂದು ಬಿಜೆಪಿ ಹೇಳಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X