ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಳ್ಗಿಚ್ಚು

By Mrutyunjaya Kalmat
|
Google Oneindia Kannada News

Fire in BR hills forest
ಯಳಂದೂರು, ಮಾ. 10 : ಬಿಳಿಗಿರಿರಂಗನ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಕಾಳ್ಗಿಚ್ಚು ವ್ಯಾಪಿಸಿದ್ದು ನೂರಾರು ಎಕರೆ ಕುರುಚಲು ಕಾಡು ಬೆಂಕಿಗೆ ಆಹುತಿಯಾಗಿದೆ. ಬಿಆರ್ಟಿ ಉದ್ಯಾನವನದ ಕೃಷ್ಣಯ್ಯನಕಟ್ಟೆ, ಸಾಲುಬೆಟ್ಟ ಮತ್ತು ಜೇನುಗುದ್ದ ಪ್ರದೇಶಗಳಲ್ಲಿ ಏಕಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದು ಕಿಡಿಗೇಡಿಗಳ ಕೃತ್ಯ ಇರಬಹುದೆಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಸ್ಥಳದಲ್ಲಿರುವ ಅರಣ್ಯಾಧಿಕಾರಿಗಳು ವನ್ಯಧಾಮದ ಸಿಬಂದಿಗಳೊಂದಿಗೆ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಮಂದಿಯನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಒಣಗಿರುವ ಹುಲ್ಲು, ಲಾಂತೆನಾ ಸೇರಿದಂತೆ ಕುರುಚಲು ಗಿಡಗಳು ಹೊತ್ತಿ ಉರಿಯುತ್ತಿವೆ. ಮರಗಳು ಇನ್ನೂ ಹಸಿರಿರುವ ಕಾರಣ ಬೆಂಕಿ ಮೇಲ್ಭಾಗಕ್ಕೆ ವ್ಯಾಪಿಸಿಲ್ಲ. ಈ ವನ್ಯಧಾಮದಲ್ಲಿ ಅಪರೂಪದ ಸಸ್ಯ, ಪ್ರಾಣಿ ಮತ್ತು ಗಿಡಮೂಲಿಕೆ ಸಸ್ಯಗಳಿವೆ. ಬೆಂಕಿ ಪ್ರಾಣಿ ಮತ್ತು ಸಸ್ಯ ಸಂಕುಲದ ಕಡೆ ಹರಡುವುದನ್ನು ತಡೆಯಲು ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಬಳ್ಳಾರಿ ವರದಿ : ಹೊಸಪೇಟೆ ವ್ಯಾಸನಕೆರೆ ಪ್ರದೇಶದ ರಾಯನಕೆರೆ ಗುಡ್ಡ ಬೆಂಕಿ ಆಕಸ್ಮಿಕದಲ್ಲಿ ಭಸ್ಮವಾಗಿದೆ ಎಂದು ವರದಿಯಾಗಿದೆ. ಅಗ್ನಿ ದುರಂತದಲ್ಲಿ 2.5 ಎಕರೆ ಪ್ರದೇಶದ ಗುಡ್ಡ ನಾಶವಾಗಿದ್ದು, ನೂರಾರು ಪ್ರಾಣಿ ಪಕ್ಷಿಗಳು ಪ್ರಾಣ ಕಳೆದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿರಹಟ್ಟಿ ವರದಿ : ಶಿರಹಟ್ಟಿ ತಾಲೂಕಿನ ಅರಣ್ಯ ವ್ಯಾಪ್ತಿ ಛಬ್ಬಿ ಮತ್ತು ಕುಂದ್ರಲ್ಲಿ ಗ್ರಾಮಗಳ ಬಳಿಯ ಗುಡ್ಡದಲ್ಲಿ ಸೋಮವಾರ (ಮಾ. 8) ಬೆಳಗ್ಗೆ ಹತ್ತಿದ ಬೆಂಕಿ ಪಕ್ಕದ ಗುಡ್ದಕ್ಕೂ ಪಸರಿಸಿ ಕೆನ್ನಾಲಿಗೆ ಚಾಚಿದ್ದರಿಂದ ನೂರಾರು ಹೆಕ್ಟೇರ್ ಪ್ರದೇಶದ ಅರಣ್ಯ ಸಂಪತ್ತುಗಳು ಸುಟ್ಟು ಕರಕಲಾಗಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ಗುಡ್ದವೀಗ ಕರಿ ಮಣ್ಣಿನ ಗುಂಪೆಯಂತೆ ಕಾಣುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X