ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದನ ಪಾಪ ತೊಳೆಯುವ ಪುಷ್ಕರಣಿ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

ರಾಮನಗರ, ಮಾ. 10 : ಬಿಡದಿಯ ನಿತ್ಯಾನಂದ ಪೀಠದಲ್ಲಿ 21 ಅಡಿ ಎತ್ತರದ ಲಿಂಗ ಮತ್ತು ಸಾವಿರದ ಒಂದು ಲಿಂಗಗಳ ಪುಷ್ಕರಣಿಯನ್ನ ನಿರ್ಮಾಣ ಮಾಡಿ ವೈದ್ಯಸರೋವರವೆಂದು ನಿತ್ಯಾನಂದ ಹೆಸರಿಟ್ಟಿದ್ದ. ಈ ವೈದ್ಯಸರೋವರದಲ್ಲಿ ಮುಳುಗೆದ್ದು ಭಕ್ತಿಯಿಂದ ಧ್ಯಾನ ಮಾಡಿ ನಿತ್ಯಾನಂದ ಆಶೀರ್ವಾದ ಪಡೆದರೆ ಪಾಪ ನಿವಾರಣೆಯಾಗಿ ಇಷ್ಟಾರ್ಥಸಿದ್ದಿಯಾಗುತ್ತದೆಂದು ಬೊಗಳೆ ಬಿಟ್ಟು ಭಕ್ತರನ್ನ ನಂಬಿಸಿದ್ದ. ಈ ವೈದ್ಯ ಸರೋವರದಲ್ಲಿ ಧ್ಯಾನ ಮಜ್ಜನ ಮಾಡಲೂ ಭಕ್ತರನ್ನ ಹಣ ವಸೂಲಿ ಮಾಡುತ್ತಿದ್ದ. ವಿಪರ್ಯಾಸವೆಂದರೆ, ಈಗ ಆತನ ಪಾಪದ ಕೊಡವೇ ತುಂಬಿದಂತಾಗಿದೆ. ತನ್ನ ಪಾಪವನ್ನು ತೊಳೆದುಕೊಳ್ಳಲು ಅದೇ ಪುಷ್ಕರಣಿಯಲ್ಲಿ ನಿತ್ಯಾನಂದ ಮುಳುಗೇಳುವನೆ?

ಧ್ಯಾನಪೀಠದ ಬಳಿ ಪೋಲೀಸರನ್ನು ವಾಚ್‌ಮೆನ್‌ಗಳಂತೆ ಕಳ್ಳ ಕಾವಿಯ ಮಠವನ್ನ ಕಾಯಲು ನಿಯೋಜಿಸಿರುವುದು ನಿಜಕ್ಕೂ ಬೇಸರ ತರುವ ಸಂಗತಿ. ತಕ್ಷಣವೇ ಪ್ರಕರಣವನ್ನ ಪೋಲೀಸ್ ಮಹಾನಿರ್ದೇಶಕ ಅಜಯ್ ಕುಮಾರಸಿಂಗ್‌ರವರ ನೇತೃತ್ವದಲ್ಲಿ ತನಿಖೆ ನಡೆಸಿದರೆ ಪ್ರಕರಣದ ಸತ್ಯಾಂಶವನ್ನ ಬಯಲಿಗೆಳೆಯಲು ಸಾಧ್ಯವಾಗುತ್ತದೆ. ತಮಿಳುನಾಡು ಮತ್ತು ಕರ್ನಾಟಕ ಪೋಲೀಸರ ಕಣ್ಣಾಮುಚ್ಚಾಲೆ ಆಟದಿಂದ ನಿತ್ಯಾನಂದನ ಕಾಮಕೇಳಿಯ ಪ್ರಕರಣ ಹಳ್ಳಹಿಡಿಯದಂತೆ ನೋಡಿಕೊಳ್ಳಬೇಕಾಗಿದೆ ಎಂದು ಜಯಕರ್ನಾಟಕ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ವಿದೇಶದಲ್ಲೂ ಕಾಮಲೀಲೆ? : ಸರ್ವಸಂಗ ಪರಿತ್ಯಾಗಿ ಅಂತ ಹೇಳಿಕೊಂಡೇ ಸ್ತ್ರೀಲೋಲನಾಗಿ ಕುಖ್ಯಾತಿಗೊಂಡಿದ್ದ ನಿತ್ಯಾನಂದನ ಕಾಮಪರಾಕ್ರಮ ಕೇವಲ ಭಾರತದಲ್ಲಿ ಮಾತ್ರ ಇತ್ತೋ ಅಥವಾ ವಿದೇಶದಲ್ಲಿರೋ ತನ್ನ ಎಲ್ಲಾ ಮಠಗಳಲ್ಲೂ ವಿಸ್ತರಿಸಿಕೊಂಡಿದ್ದನೋ ಎಂಬ ಅನುಮಾನ ಕಾಡುತ್ತಿದೆ. ನಿತ್ಯಾನಂದ ತನ್ನ ಬಾಲಲೀಲೆಯ ಎಲ್ಲಾ ಫೋಟೋಗಳು ತಾನು ಓದಿದ ಶಾಲೆಯ ಫೋಟೋಗಳನ್ನು ಖ್ಯಾತನಾಮರೊಂದಿಗಿರುವ ಪೋಟೋಗಳನ್ನು ತನ್ನ ಲಿವಿಂಗ್ ಲೆಜೆಂಡ್ ಇನ್ ಪ್ಲಾನೆಟ್ ಅರ್ಥ್ ಎಂಬ ಪುಸ್ತಕದಲ್ಲಿ ದಾಖಲಿಸಿಕೊಂಡಿದ್ದಾನೆ.

ಅದೇ ರೀತಿ ದುಬೈ, ಕುವೈತ್, ಅಮೇರಿಕಾ, ಇಂಗ್ಲೆಂಡ್, ಕೋಲಂಬಿಯಾ, ಓಕ್ಲೋಹಾಮಾ, ಆಸ್ಟ್ರೇಲಿಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಧ್ಯಾನ ಆಧ್ಯಾತ್ಮದ ಹೆಸರಿನಲ್ಲಿ ಹೈಫೈ ಮಠಗಳನ್ನ ನಿರ್ಮಿಸಿಕೊಂಡಿದ್ದ. ಬೇರೆ ದೇಶಗಳಲ್ಲಿ ಹಲ್ಲು ಬಿಡುತ್ತಲೇ ವಿದೇಶೀ ಭಕ್ತರನ್ನ ಸೆಳೆದುಕೊಳ್ಳುತ್ತಿದ್ದ ಕಾವಿ ಕಾಮಿ ನಿತ್ಯಾನಂದ ವಿದೇಶದಲ್ಲೂ ಹಲವಾರು ಕಾರ್ಯಕ್ರಮಗಳನ್ನ ಮಾಡಿ ವಿದೇಶೀಯರಿಂದ ಬಾರೀ ವಂತಿಗೆಯನ್ನೇ ವಸೂಲಿ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಬೆಡ್ರೂಮಿಗೆ ನಿಷೇಧ : ಕಾವಿ ಕಾಮಿ ನಿತ್ಯಾನಂದನ ವೈಭವೋಪೇತ ಪರ್ಸ್‌ನಲ್ ಬೆಡ್‌ರೂಂ ಇರುವ ಸ್ಥಳದಲ್ಲಿ ನಿರ್ಬಂಧಿತ ಪ್ರದೇಶವೆಂಬ ಬೋರ್ಡ್ ತಗುಲಿಹಾಕಿ ನಿತ್ಯಾನಂದನ ಚೇಲಾಗಳು ಕಾವಲಿಗೆ ನಿಂತಿದ್ದಾರೆ. ಕುಟೀರದ ರೀತಿ ಇರುವ ಇದೇ ಬೆಡ್‌ರೂಂನಲ್ಲಿ ರಂಜಿತಾಳೊಂದಿಗೆ ಕಾಮದಾಟವಾಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ನಿತ್ಯಾನಂದನ ಕಾಮಕೇಳಿಯ ವಿವಾದದ ಬಿಂದು ಲೆನಿನ್ ಮಾತ್ರ ಯಾವಾಗ ಬರುತ್ತಾನೆಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X