ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ಗಲಭೆಗೆ ಅನಕ್ಷರತೆಯೇ ಕಾರಣ : ಸಾಂಗ್ಲಿಯಾನಾ

By * ಶಿಜು ಪಾಶಾ, ಶಿವಮೊಗ್ಗ
|
Google Oneindia Kannada News

Illiteracy is the main cause of riot in Shivamogga : Sangliana
ಶಿವಮೊಗ್ಗ, ಮಾ. 10 : ಮಾ.1ರಂದು ನಡೆದ ಗಲಭೆಗೆ ಕಾನೂನು ಮತ್ತು ಸುವ್ಯವಸ್ಥೆಯ ಹಿಡಿತವಿಲ್ಲದಿರುವುದೇ ಕಾರಣ. ಈ ಗಲಭೆಗೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಂಗ ತನಿಖೆಯ ಅವಶ್ಯಕತೆ ಇಲ್ಲ ಎಂದು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಉಪ ಅಧ್ಯಕ್ಷ ಹೆಚ್.ಟಿ.ಸಾಂಗ್ಲಿಯಾನ ಹೇಳಿದರು.

ನಗರದ ಗಲಭೆ ಪೀಡಿತ ಪ್ರದೇಶಗಳಾದ ಲಷ್ಕರ್ ಮೊಹಲ್ಲಾ, ಎಂ.ಕೆ.ಕೆ.ರಸ್ತೆ, ಕೆ.ಆರ್.ಪುರಂ ರಸ್ತೆ, ಗೋಪಿಸರ್ಕಲ್, ಅಮೀರ್ ಅಹಮದ್ ಸರ್ಕಲ್, ನೆಹರು ರಸ್ತೆ, ಬಿ.ಹೆಚ್.ರಸ್ತೆ, ವಿದ್ಯಾನಗರ, ನಂಜಪ್ಪ ಲೇಔಟ್, ಎನ್.ಟಿ.ರಸ್ತೆ, ಸೀಗೆಹಟ್ಟಿ, ಟಿಪ್ಪುನಗರ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ ನಂತರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ಗಲಭೆಗೆ ಅನಕ್ಷರತೆಯೇ ಮುಖ್ಯ ಕಾರಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಾ.1ರಂದು ನಡೆದ ಗಲಭೆ ಕೇವಲ ಪ್ರಚೋದನೆಯಿಂದ ನಡೆದಿದ್ದು. ಒಂದು ಗುಂಪಿನ ಈ ರೀತಿಯ ಹೆಜ್ಜೆಯಿಂದಾಗಿ ದೊಡ್ಡದೊಂದು ಗಲಭೆ ನಡೆದುಹೋಯಿತು. ತಿಳಿವಳಿಕೆಯಿಲ್ಲದ ಒಂದಿಷ್ಟು ಜನ ಮಾಡಿದ ತಪ್ಪಿದು. ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೂ ಸೇರಿದಂತೆ ಜನಪ್ರತಿನಿಧಿಗಳು ಭೇಟಿ ಮಾಡಬಹುದಿತ್ತು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗಲಭೆ ಪೀಡಿತರಿಗೆ ಸಾಂತ್ವಾನ ನೀಡಿದ ಸಾಂಗ್ಲಿಯಾನ, ಇಂಥದ್ದೊಂದು ಗಲಭೆ ಮತ್ತೆ ಶಿವಮೊಗ್ಗದಂತಹ ನಗರದಲ್ಲಿ ನಡೆಯದಿರಲಿ ಎಂದು ಮನವಿ ಮಾಡಿಕೊಂಡರು. ಜಿಲ್ಲಾ ರಕ್ಷಣಾಧಿಕಾರಿ ಎಸ್.ಮುರುಗನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X