ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುವರ್ಣಗ್ರಾಮ ಯೋಜನೆ ವಿಸ್ತರಣೆ :ಡಿವಿಎಸ್

By Mahesh
|
Google Oneindia Kannada News

DV Sadananda Gowda
ಚಿಕ್ಕಮಗಳೂರು, ಮಾ.9:ರಾಜ್ಯದ ಎಲ್ಲಾ ಗ್ರಾಮಗಳಿಗೂ ಸುವರ್ಣಗ್ರಾಮ ಯೋಜನೆ ಜಾರಿಗೊಳಿಸುವ ಪರಿಕಲ್ಪನೆಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಡಿ.ವಿ.ಸದಾನಂದ ಗೌಡ ಅವರು ತಿಳಿಸಿದರು. ತಾಲ್ಲೂಕಿನ ಜೋಡಿಹೊಚಿಹಳ್ಳಿ ಗ್ರಾಮದಲ್ಲಿ ಸುವರ್ಣಗ್ರಾಮ ಯೋಜನೆ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಗ್ರಾಮಗಳಲ್ಲಿ ರೈತರು ಇಂದು ನೆಮ್ಮದಿಯಿಂದ ತಮ್ಮ ಬದುಕನ್ನು ಸಾಗಿಸಲು ಸಾಧ್ಯವಾಗುತ್ತಿಲ್ಲವಲ್ಲದೆ ಅವರು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯು ಸಹ ಸಿಗುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ರೈತರು ಸ್ವಾಭಿಮಾನದಿಂದ ಬದುಕುವಂತೆ ಮಾಡುವ ಉದ್ದೇಶದಿಂದ ಸರ್ಕಾರ ಇಂದು ಗ್ರಾಮೀಣ ಜನರ ಅಭಿವೃದ್ಧಿಗಾಗಿ ಹೆಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದರು. ಇದರ ಜೊತೆಗೆ ಪ್ರತಿ ಗ್ರಾಮಗಳಿಗೆ ತಲಾ ಒಂದು ಕೋಟಿ ರೂ.ಗಳ ವೆಚ್ಚದಲ್ಲಿ ಸುವರ್ಣಗ್ರಾಮೋದಯ ಕಾರ್ಯಕ್ರಮದ ಮೂಲಕ ಆಯಾ ಗ್ರಾಮಗಳಿಗೆ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಲಭ್ಯಗಳ ಬೇಡಿಕೆಯನ್ನು ಪೂರೈಸಲು ಸಹ ಸರ್ಕಾರ ಮುಂದಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿಯಿಂದ ಮಾತ್ರ ದೇಶದ ನೈಜತೆಯನ್ನು ಉಳಿಸಲು ಸಾಧ್ಯವೆಂದ ಸದಾನಂದಗೌಡ ಅವರು ಕಳೆದ ಎರಡು ವರ್ಷಗಳಿಂದೀಚೆಗೆ ರಾಜ್ಯದ ಇತಿಹಾಸದಲ್ಲಿಯೇ ನೀಡದಷ್ಟು ಆದ್ಯತೆಯನ್ನು ಗ್ರಾಮೀಣ ಭಾಗಕ್ಕೆ ಇಂದು ನೀಡಲಾಗಿದೆ ಎಂದ ಅವರು ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆವತಿಯಿಂದ ಫಲಾನುಭವಿಗಳಿಗೆ ನೀಡಲಾದ ವಿವಿಧ ಯೋಜನೆಗಳ ಮಂಜೂರಾತಿ ಪತ್ರಗಳನ್ನು ಸಹ ವಿತರಿಸಿದರು.

ಶಾಸಕ ಸಿ.ಟಿ.ರವಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಜೋಡಿಹೊಚಿಹಳ್ಳಿಯ ಸುವರ್ಣಗ್ರಾಮ ಯೋಜನೆ ಕಾಮಗಾರಿಗಾಗಿ ಪ್ರಥಮ ಕಂತಾಗಿ 40ಲಕ್ಷ ರೂ.ಗಳನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ ಎಂದ ಅವರು ಗ್ರಾಮಗಳಲ್ಲಿ ರೈತರು ಇಂದು ಕೃಷಿ ನಂಬಿ ಬದುಕುವ ಸ್ಥಿತಿ ಇಲ್ಲವಾಗಿದ್ದು ಇಂದಿನ ಪರಿಸ್ಥಿತಿ ಅವರನ್ನು ಸಾಲಗಾರರನ್ನಾಗಿ ಮಾಡಿದ್ದು ಇಂತಹ ಸನ್ನಿವೇಶದಲ್ಲಿ ಉದ್ಯೋಗವನ್ನರಸಿ ನಗರ ಪ್ರದೇಶಗಳಿಗೆ ವಲಸೆ ಹೋಗಿರುವ ಗ್ರಾಮೀಣ ಯುವಜನರನ್ನು ಮತ್ತೆ ಹಳ್ಳಿಗೆ ತರಬೇಕಾಗಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X