ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಪಾಸ್ ಪೋರ್ಟ್ ಒಪ್ಪಿಸಿದ ಹುಸೇನ್

By Mahesh
|
Google Oneindia Kannada News

MF Hussain
ದುಬೈ,ಮಾ. 8 : 95 ವರ್ಷ ವಯಸ್ಸಿನ ಚಿತ್ರಕಲಾವಿದ ಎಂ ಎಫ್ ಹುಸೇನ್ ದೋಹಾ ದಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಅಧಿಕಾರಿಗಳಿಗೆ ತಮ್ಮ ಪಾಸ್ ಪೋರ್ಟ್ ಅನ್ನು ಒಪ್ಪಿಸಿದ್ದಾರೆ ಎಂದು ಗಲ್ಫ್ ಟೈಮ್ಸ್ ವರದಿ ಮಾಡಿದೆ . ಇತ್ತೀಚಿಗೆ ಅವರಿಗೆ ಕತಾರ್ ಪೌರತ್ವ ಲಭಿಸಿತ್ತು.

ಹಿಂದೂ ದೇವತೆಗಳ ನಗ್ನ ಮತ್ತು ವಿಕೃತ ಕಲಾಕೃತಿಗಳನ್ನು ರಚಿಸಿದ್ದ ಆರೋಪದ ಮೇಲೆ ಅವರ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದವು. ಆನಂತರ ನಾಲ್ಕು ವರ್ಷಗಳಿಂದ ಸ್ವಯಂ ದೇಶಭ್ರಷ್ಟರಾಗಿ ವಿದೇಶಗಳಲ್ಲಿ ನೆಲೆಸಿದ್ದರು. ಹುಸೇನ್ ಕತಾರ್ ಪೌರತ್ವವನ್ನು ಒಪ್ಪಿಕೊಂಡಿದ್ದು ಭಾರತ ದ್ವಿಪೌರತ್ವ ಮಾನ್ಯ ಮಾಡುವುದಿಲ್ಲವಾದುದರಿಂದ ಹುಸೇನ್ ಇನ್ನು ಮುಂದೆ ಭಾರತೀಯಾರಾಗಿರುವುದಿಲ್ಲ ಎಂದು ಅವರ ಪುತ್ರ ಒವೈಸ್ ಹುಸೇನ್ ಹೇಳಿಕೆ ನೀಡಿದ್ದಾರೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X