ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಎಗೆ ಲಾಲೂ, ಮುಲಾಯಂ ಬೆಂಬಲ ವಾಪಸ್

By Mahesh
|
Google Oneindia Kannada News

Lalu, Mulayam withdraw support to upa
ನವದೆಹಲಿ, ಮಾ. 8: ಮಹಿಳಾ ವಿಧೇಯಕ ಮಂಡನೆ ವಿರೋಧಿಸಿ, ಸಮಾಜವಾದಿ ಪಕ್ಷ ಹಾಗೂ ರಾಷ್ಟ್ರೀಯ ಜನತಾದಳ ಪಕ್ಷಗಳು ಕೇಂದ್ರದ ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡಿವೆ. ಸಂಸತ್ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡುವ ಬಗ್ಗೆ ಎಸ್ ಪಿ, ಆರ್ ಜೆಡಿ ನಿರ್ಧಾರಕ್ಕೆ ಬಿ ಎಸ್ಪಿ ಕೂಡ ಬೆಂಬಲ ವ್ಯಕ್ತಪಡಿಸಿದೆ.

ಈ ನಡುವೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಕರೆದಿದ್ದ ಸರ್ವಪಕ್ಷಗಳ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ. ವಿಧೇಯಕ ಮಂಡನೆ ನಂತರದ ಬೆಳವಣಿಗೆಯ ಬಗ್ಗೆ ಚರ್ಚಿಸಲು ಪ್ರಣಬ್ ಮುಖರ್ಜಿ ಅವರು ಪ್ರಧಾನಿ ನಿವಾಸಕ್ಕೆ ತೆರಳಿದ್ದಾರೆ. ಇಂದು ಗದ್ದಲದ ನಡುವೆ ಮಹಿಳಾ ಮೀಸಲಾತಿ ವಿಧೇಯಕ ಮಂಡನೆ ಮಾಡಲಾಗಿತ್ತು ಹಾಗೂ ವಿಧೇಯಕದ ಮತಯಾಚನೆ ಇಂದು ಸಂಜೆ 6 ಗಂಟೆಗೆ ಎಂದು ನಿಗದಿಯಾಗಿತ್ತು. ಆದರೆ, ಮತಯಾಚನೆಗೂ ಮುನ್ನ ವಿಧೇಯಕ ಕುರಿತು ಚರ್ಚೆ ನಡೆಸುವ ಅಗತ್ಯವಿದೆ ಎಂದು ಬಿಜೆಪಿ ಪಟ್ಟು ಹಿಡಿದಿರುವ ಕಾರಣ, ಮತಯಾಚನೆಯನ್ನು ಮಂಗಳವಾರದವರೆಗೂ ಮುಂದೂಡಲಾಗಿದೆ.

ವಿಡಿಯೋ: ಲಾಲೂ, ಮುಲಾಯಂ ಮೀಸಲಾತಿ ನಾಟಕ

ಯುಪಿಎ ಸರ್ಕಾರಕ್ಕೆ ಬೆಂಬಲ ವಾಪಾಸ್ ಪಡೆದ ಲಾಲೂ, ಮುಲಾಯಂ ಅವರ ನಿರ್ಧಾರದಿಂದ ಸರ್ಕಾರಕ್ಕೆ ಯಾವುದೇ ತೊಂದರೆಯಾಗದು. ಲೋಕಸಭೆಯಲ್ಲಿ ಎಸ್ಪಿ ಸಂಸದರ ಸಂಖ್ಯೆ 21, ಆರ್ ಜೆಡಿ ಸಂಸದರ ಸಂಖ್ಯೆ 4. ಅಲ್ಲದೆ, ಇವೆರಡೂ ಪಕ್ಷಗಳು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದವು. ಇಂದು ಸದನದಲ್ಲಿ ನಡೆದ ಗದ್ದಲವನ್ನು ಎಡಪಕ್ಷಗಳು ಹಾಗೂ ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ಯುಪಿಎ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X