ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಕಿ ಪ್ರಕರಣ ಇತ್ಯರ್ಥಕ್ಕೆ 320 ವರ್ಷ ಬೇಕು

By Rajendra
|
Google Oneindia Kannada News

Courts will take 320 years to clear backlog cases
ಹೈದರಾಬಾದ್, ಮಾ.7: ದೇಶದ ಹೈಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ 3.12 ಕೋಟಿ ಪ್ರಕರಣಗಳನ್ನು ಇತ್ಯರ್ಥ ಮಾಡಲು 320 ವರ್ಷಗಳು ಹಿಡಿಯುತ್ತದೆ ಎಂದು ಆಂಧ್ರ ಹೈಕೋರ್ಟ್ ನ್ಯಾಯಮೂರ್ತಿ ವಿವಿ ರಾವ್ ತಿಳಿಸಿದ್ದಾರೆ.

ನ್ಯಾಯಾಂಗದಲ್ಲಿ ಇ ಆಡಳಿತ ಕುರಿತು ಅವರು ಮಾತನಾಡುತ್ತಿದ್ದರು, ಬಾಕಿ ಇರುವ ಪ್ರಕರಣಗಳನ್ನು ತೆಗೆದುಕೊಂಡರೆ ಪ್ರತಿ ನ್ಯಾಯಾಧೀಶರು ಸರಾಸರಿ 2,147 ಪ್ರಕರಣಗಳ ವಿಚಾರಣೆ ನಡೆಸಬೇಕಾಗುತ್ತದೆ ಎಂದು ಅವರು ಹೇಳಿದರು. ಸರ್ವೋಚ್ಚ ನ್ಯಾಯಾಲಯವು ಪ್ರತಿ ಹತ್ತು ಲಕ್ಷ ಜನಸಂಖ್ಯೆಗೆ 50 ನ್ಯಾಯಮೂರ್ತಿಗಳ ಅವಶ್ಯಕತೆ ಇದೆ ಎಂದು 2002ರಲ್ಲಿ ಸೂಚಿಸಿತ್ತು ಎಂದರು.

ದೇಶದಲ್ಲಿ ಒಟ್ಟು 17,641 ನ್ಯಾಯಮೂರ್ತಿಗಳಿಗೆ ಬದಲಾಗಿ 630 ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು 14,576 ನ್ಯಾಯಾಧೀಶರು ಮಾತ್ರ ಇದ್ದಾರೆ.ಈ ಲೆಕ್ಕಾಚಾರದ ಪ್ರಕಾರ ನೋಡಿದರೆ ಒಂದು ಕೋಟಿ ಜನಸಂಖ್ಯೆಗೆ ಸರಾಸರಿ 10.5 ನ್ಯಾಯಾಧೀಶರು ಬರುತ್ತ್ತಾರೆ ಎಂದು ಅವರು ವಿವರ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X