ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಭಾರತದ ರತ್ನ, ಠಾಕ್ರೆ

By Mrutyunjaya Kalmat
|
Google Oneindia Kannada News

Bala Thackrey
ಮುಂಬೈ, ಮಾ. 5 : ಕ್ರಿಕೆಟ್ ರಂಗದ ಮೇರು ಆಟಗಾರ ಸಚಿನ್ ತೆಂಡೂಲ್ಕರ್ ಈಗಾಗಲೇ ಭಾರತರತ್ನ ಕಿರೀಟ ಧರಿಸಿದ್ದಾನೆ. ದೇಶದ ಉನ್ನತ ಪ್ರಶಸ್ತಿ ಪಡೆಯಲು ಆತನಿಗೆ ಯಾರ ವಶೀಲಿಯೂ ಬೇಡ ಎಂದು ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ಹೇಳಿದ್ದಾರೆ.

ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಬರೆದಿರುವ ಠಾಕ್ರೆ, ಸಚಿನ್ ಅವರನ್ನು ಮುಕ್ತವಾಗಿ ಪ್ರಶಂಶಿಸಿದ್ದಾರೆ. ಶಿವಾಜಿ ಮಹಾರಾಜ್ ವಿರೋಧಿಗಳಾದ ಮೊಘಲರನ್ನು ಸದೆಬಡಿದ ಹಾಗೆ, ಕ್ರಿಕೆಟ್ ಅಂಗಳದಲ್ಲಿ ಸಚಿನ್ ಎದುರಾಳಿ ತಂಡವನ್ನು ನುಚ್ಚು ನೂರು ಮಾಡಿಹಾಕಿದ್ದಾರೆ ಎಂದು ಸಚಿನ್ ನನ್ನು ಶಿವಾಜಿಗೆ ಹೋಲಿಸಿದ್ದಾರೆ.

ಶಿವಾಜಿ ಮಹಾರಾಜ್ ಕೈಯಲ್ಲಿ ಖಡ್ಗವಿತ್ತು. ಸಚಿನ್ ಕೈಯಲ್ಲಿ ಬ್ಯಾಟ್ ಇದೆ. ತನ್ನ ಬ್ಯಾಟ್ ಮೂಲಕ ಜಗತ್ತಿನ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿರುವ ಸಚಿನ್ ಗೆ ಭಾರತರತ್ನ ಕಿರೀಟ ಈಗಾಗಲೇ ಸಂದಿದೆ. ಆತನನ್ನು ಆರಾಧಿಸುವ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳು ಆತನಿಗೆ ಭಾರತರತ್ನ ನೀಡಿದ್ದಾರೆ. ಸಚಿನ್ ಗೆ ಯಾರ ವಶೀಲಿಯೂ ಬೇಕಿಲ್ಲ ಎಂದು ಠಾಕ್ರೆ ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರ ಹಾಗೂ ಮುಂಬೈ ಭಾರತೀಯರದ್ದು, ಈ ನೆಲೆದಲ್ಲಿ ಎಲ್ಲರೂ ಜೀವಿಸುವ ಹಕ್ಕಿದೆ ಎಂದು ಹೇಳಿಕೆ ನೀಡಿದ್ದ ಸಚಿನ್ ವಿರುದ್ಧ ತೀವ್ರ ಠಾಕ್ರೆ ವಾಗ್ದಾಳಿ ನಡೆಸಿದ್ದರು. ಸಚಿನ್ ಹೇಳಿಕೆ ಮರಾಠಿಗರನ್ನು ಅವಮಾನ ಮಾಡಿದಂತಾಗಿದೆ ಎಂದು ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದರು. ಸಚಿನ್ ಹೇಳಿಕೆ ವಾದವಿವಾದಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X