ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಲಿಕುಳ ನಿಸರ್ಗಧಾಮಕ್ಕೆ ಕಾರಂತರ ಹೆಸರಿಡಿ

By Mahesh
|
Google Oneindia Kannada News

HC clears Pilikula to be renamed after Dr.Karanth
ಮಂಗಳೂರು, ಮಾ.5:ಇಲ್ಲಿನ ಹೊರವಲಯದಲ್ಲಿರುವ 'ಪಿಲಿಕುಳ ನಿಸರ್ಗಧಾಮ' ಕ್ಕೆ ಡಾ. ಕೆ ಶಿವರಾಮ ಕಾರಂತರ ಹೆಸರಿಡಲು ಇದ್ದ ಆಡ್ಡಿ ನಿವಾರಣೆಯಾಗಿದೆ. ಡಾ. ಕಾರಂತರ ಹೆಸರಿಡುವಂತೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪಾಲಿಸುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ನಿಸರ್ಗಧಾಮದ ಉಸ್ತುವಾರಿ ನೋಡುಕೊಳ್ಳುತ್ತಿದ್ದ ಜೆ ಆರ್ ಲೊಬೊ ಅವರು ಸರ್ಕಾರದ ಆದೇಶವನ್ನು ಪ್ರಶ್ನಿಸಿ ರಿಟ್ ಅರ್ಜಿ ಸಲ್ಲಿಸಿದ್ದರು. ಗುರುವಾರ ಇದರ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದು, ರಿಟ್ ಅರ್ಜಿಯನ್ನು ವಜಾಗೊಳಿಸಿ ಮೇಲ್ಕಂಡ ಆದೇಶವನ್ನು ಹೊರಡಿಸಿದೆ. ಪಿಲಿಕುಳ ನಿಸರ್ಗಧಾಮದ ಒಂದು ಭಾಗಕ್ಕೆ ಈಗಾಗಲೇ ಕಾರಂತರ ಹೆಸರಿಡಲಾಗಿದೆ. 1997 ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೊರಡಿಸಲಾದ ನಿರ್ಣಯದಂತೆ ನಿಸರ್ಗಧಾಮಕ್ಕೆ ಶಿವರಾಮ ಕಾರಂತರ ಹೆಸರಿಡಲು ಸರ್ಕಾರ ಸೂಚಿಸಿತ್ತು.

ತುಳು ಭಾಷೆಯಲ್ಲಿ 'ಪಿಲಿ' ಎಂದರೆ ಹುಲಿ, 'ಕುಳ' ಎಂದರೆ ನೀರಿನ ಆಗರ. ಹುಲಿಗಳು ನೀರು ಕುಡಿಯಲು ಬರುವ ಜಾಗ ಎಂಬ ಹಿನ್ನೆಲೆಯಲ್ಲಿ ಆ ಹೆಸರು ರೂಢಿಯಿಂದ ಬಂದಿದೆ. ಇದನ್ನು ಬದಲಾಯಿಸುವುದು ಸರಿಯಲ್ಲ. ಕಾರಂತರು ಜನ್ಮತಃ ಮಂಗಳೂರಿನವರಲ್ಲ ಎಂದು ಲೊಬೊ ಸೇರಿದಂತೆ ಸ್ಥಳೀಯ ವಾದಿಸಿದ್ದರು. ಆದರೆ ಇವರ ವಾದವನ್ನು ಮಾನ್ಯ ಮಾಡದ ನ್ಯಾಯಮೂರ್ತಿ ವಿ ಗೋಪಾಲ ಗೌಡ ಹಾಗೂ ಬಿ ಎಸ್ ಪಾಟೀಲ್ ಅವರ ವಿಭಾಗೀಯ ಪೀಠ, ಶಿವರಾಮ ಕಾರಂತರ ಹೆಸರಿಡುವುದೇ ಸೂಕ್ತ ನಾಲ್ಕು ವಾರದಲ್ಲಿ ಆದೇಶವನ್ನು ಪಾಲಿಸಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X