ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರ್ ಬೈಕ್ ಸಿಗರೇಟ್ ಇನ್ನಷ್ಟು ದುಬಾರಿ

By Prasad
|
Google Oneindia Kannada News

Tough bike ride for a common man
ಬೆಂಗಳೂರು, ಮಾ. 5 : ತೀವ್ರ ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದುಹೋಗಿರುವ ಮಧ್ಯಮವರ್ಗದ ಜನತೆಯ ಮೂಗಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೆ ತುಪ್ಪ ಸವರಿದ್ದಾರೆ. ಮೌಲ್ಯವರ್ಧಿತ ತೆರಿಗೆಯನ್ನು ಶೇ.1ರಷ್ಟು ಹೆಚ್ಚಿಸಲಾಗಿದೆ. ಬೈಕ್ ಮತ್ತು ಕಾರುಗಳನ್ನು ಕೊಳ್ಳಬೇಕೆಂಬ ಮಧ್ಯಮ ವರ್ಗದವರ ಆಸೆಗೆ ಹಣಕಾಸು ಸಚಿವರು ತಣ್ಣೀರು ಎರಚಿದ್ದಾರೆ.

ಬೈಕ್ ಮತ್ತು ಕಾರುಗಳು ನೊಂದಣಿ ಶುಲ್ಕವನ್ನು ಹೆಚ್ಚಿಸಲಾಗಿದೆ. ಜೊತೆಗೆ ಲೈಫ್ ಟೈಮ್ ತೆರಿಗೆಯನ್ನು ಕೂಡ ಏರಿಸಲಾಗಿದೆ. ಸರಕು ವಾಹನ ಸಾಗಾಟ ತೆರಿಗೆಯಲ್ಲಿ ಏರಿಕೆ ಕಂಡುಬರಲಿದೆ. 3ರಿಂದ 5 ಟನ್ ವಾಹನಗಳಿಗೆ 20 ಸಾವಿರ ರು. ತೆರಿಗೆ ವಿಧಿಸಲಾಗಿದೆ. ಆಹಾರ ಧಾನ್ಯ, ಸಾಂಬಾರ್ ಪದಾರ್ಥಗಳ ತೆರಿಗೆಯನ್ನು ಇಳಿಸಿ ಬಡಜನತೆಯಲ್ಲಿ ಮುಗುಳ್ನಗೆ ತರಿಸಿದ್ದ ಯಡಿಯೂರಪ್ಪ ಸಾಗಾಟ ತೆರಿಗೆಯನ್ನು ಏರಿಸಿ ಅದೇ ಮುಗುಳ್ನಗುವನ್ನು ಕಸಿದುಕೊಂಡಿದ್ದಾರೆ.

5 ಲಕ್ಷ ರು.ಗಿಂತ ಕಡಿಮೆ ದರದ ವಾಹನಕ್ಕೆ ಶೇ.12 ತೆರಿಗೆ
5 ಲಕ್ಷ ರು.ಗಿಂತ ಮೇಲ್ಪಟ್ಟ ವಾಹನಕ್ಕೆ ಶೇ.13
10 ಲಕ್ಷ ರು.ಗಿಂತ ಮೇಲ್ಪಟ್ಟ ವಾಹನಕ್ಕೆ ಶೇ.14
20 ಲಕ್ಷ ರು.ವರೆಗಿನ ವಾಹನಕ್ಕೆ ಶೇ. 17
20 ಲಕ್ಷ ರು.ಗೂ ಮೇಲ್ಪಟ್ಟ ವಾಹನಗಳ ತೆರಿಗೆ ಶೇ.18ಕ್ಕೆ ಏರಿಸಲಾಗಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಲ್ಕು ಮತ್ತು ದ್ವಿಚಕ್ರ ವಾಹನಗಳ ಮಾರಾಟ, ನೊಂದಣಿ ಮತ್ತು ಸರಕು ಸಾಗಾಟ ತೆರಿಗೆ ಸಂಗ್ರಹದಿಂದ 249 ಕೋಟಿ ರು. ಹಣ ಸಂಗ್ರಹಿಸುವ ಗುರಿಯನ್ನು ರಾಜ್ಯ ಸರಕಾರ ಹೊಂದಿದೆ.

ವಿಲಾಸಿ ಹೊಟೇಲುಗಳು ಇನ್ನು ಶ್ರೀಮಂತರಿಗೆ ಮಾತ್ರ ಸೀಮಿತ. 1 ಸಾವಿರದಿಂದ 2 ಸಾವಿರದವರೆಗೆ ಬಾಡಿಗೆ ಇರುವ ಹೊಟೇಲುಗಳ ಮೇಲಿನ ತೆರಿಗೆಯನ್ು ಶೇ.6ರಿಂದ 8ಕ್ಕೆ ಏರಿಸಲಾಗಿದೆ. ಮತ್ತು 2 ಸಾವಿರಕ್ಕೂ ಮೇಲ್ಪಟ್ಟ ಬಾಡಿಗೆ ದರವಿರುವ ಹೊಟೇಲುಗಳ ಬಾಡಿಗೆ ತೆರಿಗೆಯನ್ನು ಶೇ.10ರಿಂದ 12ಕ್ಕೆ ಏರಿಸಲಾಗಿದೆ. ಇದರಿಂದಾಗಿ ವಿಲಾಸಿ ಹೊಟೇಲುಗಳ ದರಗಳು ಇನ್ನು ಮತ್ತಷ್ಟು ದುಬಾರಿಯಾಗಲಿವೆ.

ಸಿಗರೇಟು, ಬೀಡಿ, ಗುಟ್ಕಾಗಳು ಇನ್ನು ಮುಂದೆ ಮತ್ತಷ್ಟು ದುಬಾರಿಯಾಗಲಿವೆ. ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಶೇ. 12.5ರಿಂದ ಶೇ.15ಕ್ಕೆ ಏರಿಸಲಾಗಿದೆ. ಆದರೆ, ಶಾಲಾ ಮಕ್ಕಳ ಬೆನ್ನೇರುವ ಬ್ಯಾಗುಗಳ ಬೆಲೆಯನ್ನು ಶೇ.5ರಷ್ಟು ಇಳಿಸಲಾಗಿದೆ.

ಕರ್ನಾಟಕ ಬಜೆಟ್ 2010-11 ಮುಖ್ಯಾಂಶಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X