ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಸಾಮಾನ್ಯರ ಓಲೈಕೆಯ ಬಜೆಟ್ ನಿರೀಕ್ಷೆ

By Mahesh
|
Google Oneindia Kannada News

BSY reading Karnataka Budget 2010-11 draft
ಬೆಂಗಳೂರು, ಮಾ 4 : ಮುಖ್ಯಮಂತ್ರಿ ಯಡಿಯೂರಪ್ಪ ಶುಕ್ರವಾರ ಮಾ.5ರಂದು ಪ್ರಸಕ್ತ ಸಾಲಿನ ಬಜೆಟ್ ಮುಂಗಡ ಪತ್ರವನ್ನು ವಿಧಾನಸಭೆಯಲ್ಲಿ ಮಂಡಿಸಲಿದ್ದಾರೆ. ಬಿಬಿಎಂಪಿ ಚುನಾವಣೆ ಹತ್ತಿರಾಗುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ಹತ್ತು ಹಲವು ಜನಪ್ರಿಯ ಕಾರ್ಯಕ್ರಮ, ಬೆಂಗಳೂರು ನಗರಕ್ಕೆ ವಿಶೇಷ ಆದ್ಯತೆ ಘೋಷಣೆ ಮಾಡುವುದು ನಿಶ್ಚಿತ.

ಖಾಲಿ ಉಳಿದಿರುವ ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಇಲಾಖೆಗೆ ಅನುಮತಿ ಕೊಡುವುದು, ದಿನಗೂಲಿ ನೌಕರರಿಗೆ ಹಲವು ಸೌಲಭ್ಯಗಳನ್ನು ಒದಗಿಸುವುದು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗೆ ವಿಶೇಷ ಒತ್ತು ನೀಡುವುದು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ, ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ವೇತನ ಪರಿಷ್ಕರಣೆ, ಬಿಬಿಎಂಪಿ ಚುನಾವಣಾ ಹಿನ್ನಲೆಯಲ್ಲಿ ಬೆಂಗಳೂರು ಮಹಾನಗರಕ್ಕೆ ಭರಪೂರ ಯೋಜನೆ ಪ್ರಕಟಣೆ ಸೇರಿದಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆಗಳಿವೆ.

ಸಂಪನ್ಮೂಲ ಒಟ್ಟುಗೂಡಿಸುವ ನಿಟ್ಟಿನಲ್ಲಿ ತೆರಿಗೆಯನ್ನು ಹೆಚ್ಚಿಸುವುದು ಅನಿವಾರ್ಯ ಎಂದು ಈಗಾಗಲೇ ಸಿಎಂ ಸೂಚನೆ ಕೊಟ್ಟಿರುವುದರಿಂದ ಸಾಮಾಜಿಕ ವಲಯದ ಮೇಲೆ ಹೆಚ್ಚಿನ ತೆರಿಗೆ ಹೊರೆ ಬೀಳಲಿದೆ. ಬಜೆಟ್ ಕೊರತೆಯೇ ಸುಮಾರು ಹತ್ತು ಸಾವಿರ ಕೋಟಿ ದಾಟಿರುವಾಗ ಹೊಸ ಯೋಜನೆಗಳಿಗೆ ಹಣ ಸರಕಾರ ಎಲ್ಲಿಂದ ಒದಗಿಸುತ್ತದೆ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X