ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಕ್ತವತ್ಸಲ ನಿತ್ಯಾನಂದ : ಬಿಡದಿಯಿಂದ ನೇರಪ್ರಸಾರ

By * ಪೂರ್ಣಚಂದ್ರ ಮಾಗಡಿ
|
Google Oneindia Kannada News

ರಾಮನಗರ, ಮಾ.4 : ಕಾವಿಕಂಡೊಡನೆ ಕಾಲಿಗೆ ಬೀಳುವ ಜನರು ಹೆಚ್ಚಾಗುತ್ತಿರುವುದರಿಂದಲೇ ಕೆಲವು ಕಳ್ಳ ಕಾವಿಗಳು ಧರ್ಮ, ಆಧ್ಯಾತ್ಮದ ಹೆಸರಿನಲ್ಲಿ ಮಾಡಬಾರದ್ದನ್ನೆಲ್ಲಾ ಮಾಡುತ್ತಿದ್ದಾರೆ. ಇದಕ್ಕೆ ಸತ್ಯ ನಿದರ್ಶನವೆಂದರೆ ರಾಮನಗರ ಜಿಲ್ಲೆ ಬಿಡದಿಯ ನಿತ್ಯಾನಂದಪೀಠದ ಪರಮಹಂಸ ನಿತ್ಯಾನಂದನ ಕಾಮಪುರಾಣದ ಕರ್ಮಕಾಂಡ.

ನಗ್ತಾ ನಗ್ತಾನೇ ಭಕ್ತರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದ ಮಹಾನ್ ಕಾಮಿ ನಿತ್ಯಾನಂದ ಯೋಗ, ಧ್ಯಾನ, ಮಣ್ಣು, ಮಸಿ ಅಂತ ಹೇಳಿಕೊಂಡು ಸಖತ್ ಆಗಿ ತನ್ನ ವರ್ಚಸ್ಸು ಬೆಳೆಸಿಕೊಂಡಿದ್ದ. ಈಗ ಕಪಟಯೋಗಿ ನಿತ್ಯಾನಂದನ ಕಾಮಕೇಳಿಯನ್ನ ರಹಸ್ಯ ಕ್ಯಾಮೆರಾದ ಮೂಲಕ ರಂಜಿತಾ ಎಂಬ ಸಿನೆಮಾ ನಟಿಯೊಡನೆ ನಡೆಸಿದ ಆತನ ರಾಸಲೀಲೆ ಜಗಜ್ಜಾಹೀರಾಗಿದೆ.

ಸ್ವಾಮಿ ನಿತ್ಯಾನಂದನ ನಗುವಿಗೆ, ಮಾತಿನ ಮೋಡಿಗೆ ಖ್ಯಾತ ಕನ್ನಡ ನಟರು, ಕರ್ನಾಟಕದ ರಾಜಕಾರಣಿಗಳು, ಬೇರೆ ರಾಜ್ಯದ ಮುಖ್ಯಮಂತ್ರಿಗಳು ಮತ್ತಿತರ ಸಮಾಜದ ಗಣ್ಯರು ಕೂಡ ಮರುಳಾಗಿದ್ದರು. ರಾಜಕಾರಣಿ, ನಟರನ್ನು ತನ್ನ ಕಾರ್ಯಕ್ರಮಗಳಿಗೆ ಕರೆಸಿ ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿದ್ದ. ಸಮಾಜದ ಖ್ಯಾತ ನಾಮರ ಸಂಪರ್ಕ ಆತನ ಎಲ್ಲ ಚಟುವಟಿಕೆಗಳಿಗೆ ಶ್ರೀರಕ್ಷೆ ನೀಡಿತ್ತು. ವಿದೇಶಿ ಮತ್ತು ಹೊರರಾಜ್ಯಗಳ ಭಕ್ತರನ್ನು ಆಕರ್ಷಿಸಿ ಹೈಫೈ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ.

ರಾಮನಗರ ಜಿಲ್ಲೆ ಬಿಡದಿಯಲ್ಲಿ ಸುಮಾರು 8 ವರ್ಷಗಳ ಹಿಂದೆ ಆಧ್ಯಾತ್ಮದಿಂದ ಮನುಷ್ಯನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವೆಂದು ಹೇಳಿ ಹಲವಾರು ಕಾರ್ಯಕ್ರಮಗಳನ್ನ ನಡೆಸುತ್ತಿದ್ದ. ಈ ನಿತ್ಯಾನಂದಪೀಠಕ್ಕೆ ಈ ಪರಮಹಂಸ ನಿತ್ಯಾನಂದ ಸ್ವಾಮೀಜಿಯೇ ಸರ್ವಸ್ವವೂ ಆಗಿದ್ದ. ಈತನಿಂದ ಆಶೀರ್ವಾದ ಪಡೆದರೆ ಇಷ್ಟಾರ್ಥಸಿದ್ದಿಯಾಗಿ ಸಮಸ್ಯೆಗಳು ದೂರವಾಗುತ್ತದೆಂಬ ಪ್ರಚಾರವನ್ನು ಮಾಡಲಾಗಿತ್ತು.

ಚಿತ್ರನಟರಾದ ದಿವಂಗತ ವಿಷ್ಣುವರ್ಧನ್, ಮಾಳವಿಕ ಅವಿನಾಶ್, ತಾರಾ, ಮುಖ್ಯಮಂತ್ರಿ ಯಡಿಯೂರಪ್ಪ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ತಮಿಳು ಮತ್ತು ಮಲಯಾಳಿ ಚಿತ್ರನಟರುಗಳು ಹಾಗೂ ರಾಜಕಾರಣಿಗಳಾದ ಡಿ.ಕೆ.ಶಿವಕುಮಾರ್, ರಾಮಚಂದ್ರೇಗೌಡ, ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಪಲ್ಲಂರಾಜು ಹಾಗೂ ಬಾಲಗಂಗಾಧರನಾಥ ಶ್ರೀಗಳು, ಸುತ್ತೂರು ಶ್ರೀಗಳು ಮತ್ತಿತರ ಮಠಾಧೀಶರುಗಳನ್ನು ಕಾರ್ಯಕ್ರಮಗಳಲ್ಲಿ ಆಹ್ವಾನಿಸಿ ಹೆಚ್ಚಿನ ಪ್ರಚಾರ ಪಡೆದುಕೊಂಡಿದ್ದ.

ಮಠ ಮಾನ್ಯಗಳು ಯಾವಾಗಲೂ ಸಾರ್ವಜನಿಕರಿಗೆ ಮುಕ್ತವಾಗಿರಬೇಕು ಮತ್ತು ಚಟುವಟಿಕೆಗಳು ಯಾವಾಗಲು ಪಾರದರ್ಶಕತೆಯಿಂದ ಕೂಡಿರಬೇಕು. ಆದರೆ ಈ ಮಠದಲ್ಲಿ ಸ್ಥಳೀಯರನ್ನು ನಿರ್ಲಕ್ಷ್ಯ ಮಾಡಿ ಕೇವಲ ಹೊರರಾಜ್ಯಗಳ ಮತ್ತು ವಿದೇಶೀಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ರಾಜಕಾರಣಿಗಳು ಮತ್ತು ಹಲವು ಖ್ಯಾತನಾಮರು ಈ ಸ್ವಾಮೀಜಿ ಒಳಮರ್ಮವನ್ನ ಅರಿಯದೇ ಧಾರ್ಮಿಕ ಕ್ಷೇತ್ರವೆನ್ನುವ ಕಾರಣಕ್ಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾಮುಕ ಸ್ವಾಮೀಜಿಯ ಪಾದಗಳಿಗೆ ನಮಸ್ಕರಿಸುತ್ತಿದ್ದರು.

ನಿತ್ಯಾನಂದನ ಕಾಮಪುರಾಣದಿಂದ ಆಕ್ರೋಶಗೊಂಡಿರುವ ಸ್ಥಳೀಯರು, ರೈತರ ಜಮೀನು ಕಬಳಿಸಿ ಧಾರ್ಮಿಕ ಕೇಂದ್ರವನ್ನು ಸ್ಥಾಪಿಸುತ್ತೇವೆಂದು ಹೇಳಿ ಅನೈತಿಕ ಚಟುವಟಿಕೆಗಳ ತಾಣವನ್ನಾಗಿಸಿಕೊಂಡಿದ್ದಾರೆಂದು ಆಕ್ರೋಶಗೊಂಡು ಸ್ವಾಮೀಜಿಯ ಫ್ಲೆಕ್ಸ್‌ಗಳನ್ನ ಕಿತ್ತುಹಾಕಿ ಸುಟ್ಟುಹಾಕಿದರು. ಮಠದ ಹೆಬ್ಬಾಗಿಲಿನ ಗಾಜುಗಳನ್ನ ಪುಡಿಪುಡಿ ಮಾಡಿ ಆಕ್ರೋಶವ್ಯಕ್ತಪಡಿಸಿದರು. ಮಠದ ಪ್ರವೇಶಕ್ಕೆ ಸಾರ್ವಜನಿಕರನ್ನಾಗಲಿ ಮಾಧ್ಯಮದವರನ್ನಾಗಲೀ ಬಿಡಲೇ ಇಲ್ಲ. ಮಠದೊಳಗೆ ವಿದೇಶೀಯರೇ ಹೆಚ್ಚಾಗಿರುವ ಕಾರಣ ಪೋಲೀಸರು ವಿದೇಶೀಯರಿಗೆ ತೊಂದರೆಯಾಗಬಹುದೆಂಬ ಕಾರಣಕ್ಕೆ ಮಠಕ್ಕೆ ಹೆಚ್ಚಿನ ರಕ್ಷಣೆ ನೀಡಿದ್ದರು. ಇಷ್ಟೆಲ್ಲಾ ನಡೆಯುತ್ತಿದ್ದರೂ ನಿತ್ಯಾನಂದ ಪೀಠದ ಮೇಲೆ ದಾಳಿ ನಡೆಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸದೇ ಕಂಡರೂ ಕಾಣದಂತೆ ರಾಜ್ಯ ಸರ್ಕಾರ ಜಾಣಕುರುಡುತನ ಪ್ರದರ್ಶಿಸುತ್ತಿದೆ ಎಂಬುದು ಸ್ಥಳೀಯರ ಆರೋಪವಾಗಿದೆ.

ಈ ನಡುವೆ ಮಠದ ಪ್ರತಿನಿಧಿಯೊಬ್ಬರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ತಮಿಳು ಮಾಧ್ಯಮಗಳಲ್ಲಿ ಬಂದಿರುವ ವಿಡಿಯೋ ಚಿತ್ರಣಗಳು ಗ್ರಾಫಿಕ್ಸ್‌ನ ಕೈಚಳಕದಿಂದ ಕೂಡಿದೆ. ಆದ್ದರಿಂದ ತಮಿಳು ವಾಹಿನಿಯ ವರದಿಯ ಬಗ್ಗೆ ಕೋರ್ಟ್‌ನ ಮೊರೆ ಹೋಗಲಾಗುವುದು. ಈ ವರದಿಯಿಂದ ಲಕ್ಷಾಂತರ ಭಕ್ತಾದಿಗಳಿಗೆ ನೋವುಂಟಾಗಿದೆ. ವಿವಿಧ ದೇಶಗಳಲ್ಲಿರುವ ಭಕ್ತಾದಿಗಳಲ್ಲೂ ಸ್ವಾಮೀಜಿಯವರ ಬಗ್ಗೆ ಆತಂಕ ಸೃಷ್ಟಿಯಾಗಿದೆ. ಸ್ವಾಮೀಜಿಯವರು ಯಾವಾಗಲು ಸಮಾಜಸೇವೆಯನ್ನ ನಡೆಸುತ್ತಿದ್ದಾರೆಂದು ಸುಳ್ಳಿನಶಂಖ ಊದಿದ್ದಾರೆ. ಸ್ವಾಮೀಜಿ ಮತ್ತು ಮಠದ ರಕ್ಷಣೆ ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರದ ಪ್ರಮುಖ ರಾಜಕಾರಣಿಗಳು ಪೋಲೀಸರ ಮೇಲೆ ಹೆಚ್ಚು ಒತ್ತಡ ತರುತ್ತಿದ್ದಾರೆಂದು ಹೇಳಲಾಗಿದೆ.

ಮಠದಲ್ಲಿ ರೋಗ ನಿವಾರಣೆಗಾಗಿ ಬಂದಿರುವ ಅನೇಕ ಮಂದಿಯನ್ನು ಸ್ವಾಮಿಯ ಕಾಮಲೀಲೆ ತಿಳಿಯುತ್ತಿದ್ದಂತೆ ಅವರು ಸಂಬಂಧಿಕರು ಬಂದು ಆತಂಕದಿಂದ ಕರೆದೊಯ್ಯುತ್ತಿದ್ದಾರೆ. ರಾಸಲೀಲೆಯೆಲ್ಲಾ ನಡೆದು ಬಹಿರಂಗವಾಗಿದ್ದರು ಮಠದ ಕೆಲವು ಪ್ರತಿನಿಧಿಗಳು ಈಗಲು ಗುಪ್ತ್-ಗುಪ್ತ್ ವ್ಯವಹಾರ ನಡೆಸುತ್ತಿದ್ದಾರೆ. ಅಲ್ಲದೆ, ಆರು ಪರ್ಣಕುಟಿಗಳಿಗೆ ಬೆಂಕಿ ಬಿದ್ದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಉದ್ಭವವಾಗಿರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಬೇಕಾಗಿರುವ ನಿತ್ಯಾನಂದನೇ ತಲೆಮರೆಸಿಕೊಂಡಿದ್ದಾನೆ.

ನಿತ್ಯಾನಂದ ಸ್ವಾಮಿ ಲೈಂಗಿಕ ಹಗರಣದ ವಿಡಿಯೋ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X