ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಚೋದ್ಯದ ಲೇಖನ: ಚಿದಂಬರಂ

By Mrutyunjaya Kalmat
|
Google Oneindia Kannada News

P Chidambaram
ನವದೆಹಲಿ, ಮಾ. 3 : ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರ ಬರಹವೊಂದರ ಅನುವಾದವು ಕರ್ನಾಟಕದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿರುವುದರ ಬಗ್ಗೆ ಕೇಂದ್ರ ಗೃಹ ಸಚಿವ ಪಿ ಚಿದಂಬರಂ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಇದೊಂದು ಕುಚೋದ್ಯದ ಲೇಖನ ಎಂದು ಅವರು ಕಿಡಿಕಾರಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಈ ಘಟನೆಯು ತಸ್ಲೀಮಾ ಅವರ ವೀಸಾ ಅವಧಿ ವಿಸ್ತರಣೆಗೆ ಅಡ್ಡಿಯುಂಟು ಮಾಡುವುದಿಲ್ಲ ಎಂದರು. ಕರ್ನಾಟಕದಲ್ಲಿ ಕನ್ನಡ ಪತ್ರಿಕೆಯೊಂದು ತಸ್ಲೀಮಾ ಅವರು ಬರೆದಿದ್ದಾರೆಂಬ ಲೇಖನದ ಕನ್ನನಪವಾದವೇ ಸರಿಯಿಲ್ಲ. ಇದು ದುರದೃಷ್ಟಕರ ಮತ್ತು ಕುಚೋದ್ಯದಿಂದ ಕೂಡಿದೆ ಎಂದು ಹೇಳಿದ್ದಾರೆ.

ಈ ಲೇಖನದಿಂದಾಗಿ ಉದ್ರಿಕ್ತಗೊಂಡ ಒಂದು ಸಮುದಾಯದ ಜನರು ಹಿಂಸಾಚಾರಕ್ಕಿಳಿದ ಹಿನ್ನೆಲೆಯನ್ನು ತಹಬದಿಗೆ ತರುವುದಕ್ಕಾಗಿ ಕರ್ನಾಟಕಕ್ಕೆ ಅರೆಸೇನಾಪಡೆಯನ್ನು ಕಳುಹಿಸಿ ಕೊಟ್ಟಿದ್ದೇವೆ ಎಂದು ಚಿದಂಬರಂ ವಿವರಿಸಿದರು. ಸೋಮವಾರ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದು, ಗಲಭೆಯನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ನಡೆಸುತ್ತಿರುವ ಪ್ರಯತ್ನಕ್ಕೆ ಕೈಜೋಡಿಸುವುದಾಗಿ ಅವರು ಹೇಳಿದರು. ಕರ್ನಾಟಕದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ರಾಜ್ಯಪಾಲರು ಮುಸ್ಲಿಂ ಮುಖಂಡರಸಭೆ ಕರೆದು ಮಾತುಕತೆ ನಡೆಸಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X