ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರಿಗೆ ಬಿಡಿಗಾಸು, ಬಿಡಿಎಗೆ ಇಡಿಗಾಸು

By * ಗೀತಾ ಎಮ್, ಕುಣಿಗಲ್
|
Google Oneindia Kannada News

Bangalore Development Authority
ಕುಣಿಗಲ್, ಮಾ. 3 : ನಗರ ಅಭಿವೃದ್ಧಿ ಯೋಜನೆಯ ಹೆಸರಿನಲ್ಲಿ ಸಿಲಿಕಾನ್ ನಗರಿಯನ್ನು ಕಾಡುತ್ತಿರುವ ಬಡಾವಣೆಗಳ ನಿರ್ಮಾಣ, ಬಡಾವಣೆಗಳ ಹೆಸರಿನಲ್ಲಿ ಕುಟುಂಬಗಳ ಸ್ಥಳಾಂತರ, ಅಭಿವೃದ್ಧಿ ಹೆಸರಿನಲ್ಲಿ ರಿಯಲ್ ಎಸ್ಟೇಟ್‌ಗಳ ಬೆಳವಣಿಗೆ, ರೈತರ ಒಕ್ಕಲುತನ ಎತ್ತಂಗಡಿ, ಬಿಡಿಗಾಸು ನೀಡಿ ಕೋಟಿಗಟ್ಟಲೆ ಹಣ ಮಾಡುತ್ತಿರುವ ಪ್ರಾಧಿಕಾರ. ಇವುಗಳಿಗೆ ಕೊನೆಯೇ ಇಲ್ಲವೇನು? ಸರ್ಕಾರದ ನೀತಿಗಳಲ್ಲಿ ಭವಿಷ್ಯತ್ತಿನ ಆಲೋಚನೆ ಮಾಯವಾಗಿ ಕುರುಡು ಕಾಂಚಾಣಕ್ಕೆ ನಮ್ಮ ಊರು ಕೇರಿಗಳನ್ನು ಮಾರಿಕೊಳ್ಳಬೇಕೇನು?

ಬೆಂಗಳೂರಿನ ಸುತ್ತಲೂ ಬಿಡಿಎ ಬಡಾವಣೆಗಳು ನಾಯಿಕೊಡೆಗಳಂತೆ ಹುಟ್ಟುಕೊಳ್ಳುತ್ತಿವೆ. ಈಗಾಗಲೇ ಕೆಂಪೇಗೌಡ ಬಡಾವಣೆ, ಅರ್ಕಾವತಿ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಗಳನ್ನು ಜನತೆ ವಿರೋಧಿಸುತ್ತಿದ್ದಾರೆ, ಆದರೆ ಸರ್ಕಾರದ ಕಿವಿ ಮುಚ್ಚಿದೆಯೇ? ರೈತರಿಂದ ಪಡೆದ ಭೂಮಿಗೆ ಬಿಡಿಎ ಮಾರುಕಟ್ಟೆ ಬೆಲೆಯನ್ನಾದರೂ ನೀಡುತ್ತಿಲ್ಲ. ಇದರಲ್ಲಿ ರಿಯಲ್ ಎಸ್ಟೇಟ್‌ಗಳ ಕರಾಮತ್ತು ಬೇರೆ. ಈ ಹಾವಳಿಯಲ್ಲಿ ನವನಾಗರೀಕತೆ ನಿರ್ಮಾಣ ಕನಸಷ್ಟೆ.

ಬೆಂಗಳೂರಿಗೆ ಮಾರು ಹೋಗಿರುವುದು ಬರೀ ಕರ್ನಾಟಕದವರು ಮಾತ್ರವಲ್ಲ, ಉತ್ತರ ಭಾರತದಿಂದಲೂ ಜನ ವಲಸೆ ಬರುತ್ತಿರುವುದನ್ನು ಕಾಣಬಹುದಾಗಿದೆ. ಈ ಬಡಾವಣೆಗಳ ನಿರ್ಮಾಣದಿಂದ ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚುತ್ತದೆಯೇ ಹೊರತು ಅಭಿವೃದ್ಧಿಯಾಗದು. ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ, ಮೂಲಭೂತವಾಗಿ ನೀರಿನ ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಸರ್ಕಾರ ರೈತರನ್ನು ಕಾಡುವ ಬದಲು ದೂರಾಲೋಚನೆಯಿಂದ ಹೆಜ್ಜೆ ಇಡುವುದು ಅಗತ್ಯವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X