ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಬಂದಿದೆ , ಬಸ್ ದಿನ, ಡೋಂಟ್ ಮಿಸ್

By Mahesh
|
Google Oneindia Kannada News

Bus Day on March 4
ಬೆಂಗಳೂರು, ಮಾ.3 : ಬಸ್ ದರ ಏರಿಕೆ ಕರಿನೆರಳಿನಡಿಯಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತೊಮ್ಮೆ ಬಸ್ ದಿನ ಆಚರಣೆಗೆ ಸಜ್ಜಾಗಿದೆ. ಕಳೆದ ತಿಂಗಳು ಫೆ. 4 ರಂದು ಮೊದಲ ಬಸ್ ದಿನ ಆಚರಣೆ ಯಶಸ್ವಿಯಾಗಿತ್ತು. ಈ ವರ್ಷಪೂರ್ತಿ ಪ್ರತಿ ತಿಂಗಳ 4ನೇ ತಾರೀಖಿನಂದು ಬಸ್ ದಿನ ಆಚರಿಸುವುದಾಗಿ ಬಿಎಂಟಿಸಿ ಪ್ರಕಟಿಸಿದೆ.

ಹೊಸೂರು ರಸ್ತೆ (ಎಲೆಕ್ಟ್ರಾನಿಕ್ ಸಿಟಿ) ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆ (ಐಟಿಪಿಎಲ್)ನ ಐಟಿ ಕಾರಿಡಾರ್ ಗಳ ಟೆಕ್ಕಿಗಳ ಭಾಗವಹಿಸುವಿಕೆಯಿಂದ ಬಸ್ ದಿನಾಚರಣೆ ಯಶಸ್ಸುಕಂಡಿತ್ತು. ಯಾಹೂ ಗ್ರೂಪ್ಸ್, ಟ್ವಿಟ್ಟರ್, ಆರ್ಕುಟ್, ಫೇಸ್ ಬುಕ್, ದಟ್ಸ್ ಕನ್ನಡ ಇತ್ಯಾದಿ ಇತ್ಯಾದಿ ವೆಬ್ ತಾಣಗಳಲ್ಲಿ ಬಸ್ ಡೇ ಆಚರಣೆ ಸಂಕಲ್ಪ ಕೈಗೊಂಡಿದ್ದ ಟೆಕ್ಕಿಗಳು ಬಸ್ ಹತ್ತಿ, ಪರಿಸರ ಜಾಗೃತಿ ಅಭಿಯಾನದ ಹರಿಕಾರರಾಗಿ ಮಿಂಚಿದ್ದರು. ಆದರೆ, ಈ ಬಾರಿ ಅಷ್ಟಾಗಿ ಮೇಲ್, ಮೆಸ್ಸೇಜು ಹರಿದಾಡಿದ್ದಂತಿಲ್ಲ.

ಈ ಬಾರಿ ನಗರದ ಹಳೆ ಮದ್ರಾಸ್ ರಸ್ತೆ, ಬನ್ನೇರುಘಟ್ಟ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಸರ್ಜಾಪುರ ರಸ್ತೆ ಹಾಗೂ ಹೊಸೂರು ರಸ್ತೆಗಳಲ್ಲಿ ಬಸ್ ಡೇ ಆಚರಿಸಲಾಗುವುದು. ಈ ಬಾರಿ ಸಾರ್ವಜನಿಕರೊಂದಿಗೆ ಪರಸ್ಪರ ಚರ್ಚಿಸಿ ಸಮೀಕ್ಷೆಯನ್ನು ಕೈಗೊಂಡು ನಾಗರಿಕರಿಂದ ಸಲಹೆ, ಸೂಚನೆಗಳನ್ನು ಸ್ವೀಕರಿಸಿ ಪ್ರಯಾಣದ ಆದ್ಯತೆಗೆ ಅನುಸಾರವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನು ಸಾರಿಗೆ ಸಂಸ್ಥೆ ಹೊಂದಿದೆ.

ಬಸ್ ಡೇ ಆಚರಣೆ ಮಾರ್ಗಗಳು:
*ಬನಶಂಕರಿಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬಿಟಿಎಂ ಲೇಔಟ್,ಗೊಲ್ಲಹಳ್ಳಿ, ತಿರುಪಾಳ್ಯ ಮಾರ್ಗವಾಗಿ ಜಿಗಣಿಗೆ (ಮಾರ್ಗ ಸಂಖ್ಯೆ 600 F ಇಂದ A)
*ಗೊಟ್ಟಿಗೆರೆಯಿಂದ ಬಿಟಿಎಂ ಲೇಔಟ್ ಮಾರ್ಗವಾಗಿ ಐಟಿಪಿಎಲ್ ( ಮಾರ್ಗ ಸಂಖ್ಯೆ 500 K ಇಂದ G )
*6 ಮಾರ್ಕೊಪೊಲೊ ಬಸ್ ಗಳು( 340, 341 H)
*ಮಾರತ್ತಹಳ್ಳಿಯಿಂದ ಸರ್ಜಾಪುರ ರಸ್ತೆ ಮೂಲಕ ಎಲೆಕ್ಟ್ರಾನಿಕ್ ಸಿಟಿ
*ಇವುಗಳ ಜೊತೆಗೆ 504,504A, 504 E, 504 Fಗಳು ಹೆಚ್ಚುವರಿ ಬಸ್ ಸೇವೆಯನ್ನು ಹೊಂದಿರುತ್ತವೆ.
*ವಿಜಯನಗರ, ಬಸವೇಶ್ವರನಗರ, ಯಶವಂತಪುರ, ಕೋರಮಂಗಲ,ಶಾಂತಿನಗರ, ಜಯನಗರ, ಹೆಬ್ಬಾಳ ಹಾಗೂ ಬನಶಂಕರಿ ನಿಲ್ದಾಣಗಳಲ್ಲಿ ಸಿಬ್ಬಂದಿಗಳು ವಿಶೇಷವಾಗಿ ಬಸ್ ಡೇ ಆಚರಣೆಗೆ ಸಜ್ಜಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X