ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿಶ್ವಕಪ್ ಹಾಕಿ : ಆಸೀಸ್ ವಿರುದ್ಧ ಸೋತ ಭಾರತ
ಇಲ್ಲಿನ ಧ್ಯಾನ್ ಚಂದ್ ಮೈದಾನದಲ್ಲಿ ಮಂಗಳವಾರ ನಡೆದ (ಮಾ 2 ) ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ಚೇತೋಹಾರಿ ಪ್ರದರ್ಶನ ನೀಡಿ ಮೊದಲಿನಿಂದಲೂ ಆಕ್ರಮಣ ಆಟಕ್ಕೆ ಇಳಿಯಿತು. ಆಸ್ಟ್ರೇಲಿಯಾ ಪರ ಗ್ಲೆನ್ ಟರ್ನರ್ ಎರಡು ಗೋಲು ಗಳಿಸಿ ಮಿಂಚಿದರೆ, ಲಿಯಾಂಡಿ ಯಂಗ್, ಡೆಸ್ಮಂಡ್ ಅಬಾಟ್ ಮತ್ತು ಲುಕ್ ದೊಯೇರ್ನರ್ ತಲಾ ಒಂದೊಂದು ಗೋಲು ಗಳಿಸಿದರು. ಭಾರತದ ಪರ ವಿಕ್ರಂ ಪಿಳ್ಳೈ ಮತ್ತು ರಾಜಪಾಲ್ ಸಿಂಗ್ ತಲಾ ಒಂದುಗೋಲು ದಾಖಲಿಸಿದರು.
ಮಂಗಳವಾರ ನಡೆದ ಇತರ ಎರಡು ಪಂದ್ಯದಲ್ಲಿ ಪಾಕಿಸ್ತಾನ ಸ್ಪೇನ್ ವಿರುದ್ದ 2 -1 ರೋಚಕ ಜಯ ದಾಖಲಿಸುವ ಮೂಲಕ ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಮೊದಲ ಜಯ ದಾಖಲಿಸಿತು. ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ದಕ್ಷಿಣ ಆಫ್ರಿಕಾ ವಿರುದ್ದ 6-4 ಗೋಲುಗಳಿಂದ ಜಯಭೇರಿ ಬಾರಿಸಿ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.
Story first published: Friday, March 5, 2010, 10:56 [IST]