ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚರ್ಚೆಗೆ ಬನ್ನಿ ಇಲ್ಲದಿದ್ದರೆ ಯುದ್ಧಕ್ಕೆ ಸಿದ್ಧರಾಗಿ

By Mrutyunjaya Kalmat
|
Google Oneindia Kannada News

Hafiz Saeed
ಇಸ್ಲಾಮಾಬಾದ್, ಮಾ.1 : ಕಾಶ್ಮೀರ ವಿವಾದ ಹಾಗೂ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನದೊಂದಿಗೆ ಮಾತುಕತೆ ಮುಂದಾಗದಿದ್ದರೆ ಯಾವುದೇ ಬೆಲೆ ತೆತ್ತಾದರೂ ಸರಿ ಯುದ್ಧವನ್ನು ಎದುರಿಸಬೇಕು ಎಂದು ಲಷ್ಕರ್ ಇ ತೊಯ್ಬಾ ಹಾಗೂ ಜಮಾತ್ ಉದ್ ದವಾ ಉಗ್ರ ಸಂಘಟನೆಯ ಮುಖಂಡ ಹಫೀಜ್ ಮೊಹ್ಮದ್ ಸಯೀದ್ ಹೇಳಿದ್ದಾನೆ.

ಮುಂಬೈ ದಾಳಿ ಬಳಿಕ ಉಭಯ ದೇಶಗಳ ವಿದೇಶಾಂಗ ಕಾರ್ಯದರ್ಶಿ ಮಟ್ಟದ ಮೊದಲ ಅಧಿಕೃತ ಮಾತುಕತೆ ನವದೆಹಲಿಯಲ್ಲಿ ಫೆ. 25 ರಂದು ನಡೆದಿರುವ ಮಧ್ಯೆಯೂ ಭಾರತಕ್ಕೆ ಯುದ್ದ ಬೇಕಾಗಿದೆ ಎಂದು ಉಗ್ರ ಹಫೀಜ್ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದಾನೆ. ಮುಂಬೈ ದಾಳಿಯ ಆರೋಪಿ ಎಂದು ಭಾರತ ಯಾವುದೇ ನ್ಯಾಯಾಲಯದಲ್ಲಾದರೂ ಸಾಬೀತುಪಡಿಸಿದರೆ ಒಪ್ಪಿಕೊಳ್ಳಲು ಸಿದ್ಧ ಎಂದಿದ್ದಾನೆ.

ಭಾರತದ ವಿರುದ್ಧ ಜಿಹಾದ್ ಗಾಗಿ ಜನ ಕಾಶ್ಮೀರಕ್ಕೆ ತೆರಳಬೇಕೇ ಎಂದಿದ್ದಕ್ಕೆ ಅದರಲ್ಲಿ ಸಂದೇಹವೇ ಇಲ್ಲ. ಅದು ಆಗಲೇಬೇಕು ಎಂದು ಹೇಳಿದ್ದಾನೆ. ಸಂದರ್ಶನದಲ್ಲಿ ಸಯೀದ್ ಮುಖವನ್ನು ಮುಚ್ಚಿ ಹಿಂಬದಿಯಿಂದ ಆತನ ಹೆಗಲಿನ ಭಾಗವನ್ನು ಮಾತ್ರ ತೋರಿಸಲಾಯಿತು. ಷರಿಯ ಅಥವಾ ಇಸ್ಲಾಂ ಕಾನೂನಿನಲ್ಲಿ ಮುಖ ತೋರಿಸಲು ಅವಕಾಶವಿಲ್ಲ ಎಂದು ಆತ ಈ ಸಂದರ್ಭದಲ್ಲಿ ಸಮರ್ಥಿಸಿಕೊಂಡಿದ್ದಾನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X