ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 4ರಂದು IE6 ಬ್ರೌಸರ್ ಶವ ಸಂಸ್ಕಾರ!

By Prasad
|
Google Oneindia Kannada News

Funeral of IE6!
ಕ್ಯಾಲಿಫೋರ್ನಿಯಾ, ಫೆ. 28 : ಅಂತರ್ಜಾಲಿಗರಿಂದ ಅತೀ ಹೆಚ್ಚು ಬಳಕೆಯಾಗುತ್ತಿದ್ದ ಮೈಕ್ರೋಸಾಫ್ಟ್ ಕಂಪನಿಯ IE6 ಬ್ರೌಸರ್ ಮಾರ್ಚ್ 1ರಂದು ಕೊನೆಯುಸಿರೆಳೆಯಲಿದೆ! ಡೆನ್ವರ್ ನಲ್ಲಿನ ವೆಬ್ ವಿನ್ಯಾಸ ಕಂಪನಿಯೊಂದು ಮಾರ್ಚ್ 4ರಂದು IE6ನ ಅಂತಿಮ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಿದೆ!

"ಗೂಗಲ್ ಹೆಡ್ ಕ್ವಾರ್ಟರ್ಸ್ ನಲ್ಲಿ ಆದ ಗಾಯದಿಂದ ಚೇತರಿಸಿಕೊಳ್ಳದೆ IE6 ಮಾರ್ಚ್ 1ರಂದು ಕೊನೆಯುಸಿರೆಳೆಯಿತು. ಮಾರ್ಚ್ 4ರಂದು ಅದರ ಶವಸಂಸ್ಕಾರ ಮಾಡಲಾಗುವುದು" ಎಂದು ಇದಕ್ಕಾಗಿಯೇ ರಚಿಸಲಾಗಿರುವ ವೆಬ್ ತಾಣದಲ್ಲಿ ಅಟೆನ್ ಡಿಸೈನ್ ಗ್ರೂಪ್ ನೀಡಿರುವ ಆಹ್ವಾನ ಪತ್ರಿಕೆಯಲ್ಲಿ ಬಣ್ಣಿಸಿದೆ.

IE6 ಬ್ರೌಸರ್ ನ ಅಂತಿಮ ಸಂಸ್ಕಾರ ನಡೆಸುವುದು ನಿಜಕ್ಕೂ ತಮಾಷೆಯ ಸಂಗತಿ ಎಂದು ಅಟೆನ್ ಡಿಸೈನ್ ಕಂಪನಿಯ ಸ್ಥಾಪಕ ಮತ್ತು ಡೈರೆಕ್ಟರ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಗೂಗಲ್ ಕಂಪನಿ ಕೂಡ ಮಾರ್ಚ್ 13ರಿಂದ IE6 ಬ್ರೌಸರ್ ಗೆ ಬೆಂಬಲ ನೀಡುವುದನ್ನು ನಿಲ್ಲಿಸುವುದಾಗಿ ಯುಟೂಬ್ ನಲ್ಲಿ ಪ್ರಕಟಿಸಿದೆ.

ಎಂಟೂವರ್ಷಗಳ ಕಾಲ ಇಂಟರ್ನೆಟ್ಟಿನಲ್ಲಿ ಮೆರೆದಾಡಿದ IE6 ಬ್ರೌಸರ್ ಇತ್ತೀಚಿನ ದಿನಗಳಲ್ಲಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿದೆ. ಈ ಬ್ರೌಸರಿಗಾಗಿಯೇ ವೆಬ್ ತಾಣವನ್ನು ನಿರ್ಮಿಸುವುದು ನೋವಿನ ಸಂಗತಿ ಮತ್ತು ಇದರಲ್ಲಿ ರಕ್ಷಣೆಗೆ ಸಂಬಂಧಿಸಿದಂತೆ ಅನೇಕ ಕೊರತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. IE8 ಆವೃತ್ತಿ ಬಂದನಂತರ IE6 ಜನಪ್ರಿಯತೆ ಮಂಕಾಗುತ್ತ ಬಂದಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X