ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

38 ಲಕ್ಷ ರೂ.ಗಳಲ್ಲಿ ನವಲೂರ ಕೆರೆ ಅಭಿವೃದ್ಧಿ

By Mahesh
|
Google Oneindia Kannada News

MLA Chandrakant Bellad
ಧಾರವಾಡ, ಫೆ.27: ನವಲೂರ ರೈತರಿಗೆ ನೀರಾವರಿಗೆ ಉಪಯುಕ್ತವಾಗುವಂತೆ 38 ಲಕ್ಷ ರೂ.ಗಳಲ್ಲಿ ನವಲೂರ ಸಮೀಪದ ಕೆರೆಯನ್ನು ಅಭಿವೃದ್ಧಿಗೊಳಿಸಲಾಗಿದೆಯೆಂದು ಶಾಸಕ ಶ್ರೀ ಚಂದ್ರಕಾಂತ ಬೆಲ್ಲದ ಅವರು ತಿಳಿಸಿದರು.

ನವಲೂರ ಗ್ರಾಮದ ಕೆರೆಯ ಅಭಿವೃದ್ಧಿಯನ್ನು ವೀಕ್ಷಿಸಿ ಮಾತನಾಡಿ ನೂರಕ್ಕೆ ನೂರರಷ್ಟು ರೈತರೇ ಇರುವ ನವಲೂರ ಗ್ರಾಮಕ್ಕೆ ಕೃಷಿಗಾಗಿ ಕೆರೆಯ ಅಭಿವೃದ್ಧಿಯನ್ನು ಕೈಗೊಳ್ಳಲಾಗಿದೆ. ನೀರಾವರಿ ಸಲುವಾಗಿ ರೈತರಿಗಾಗಿ1885 ರಲ್ಲಿ ನಿರ್ಮಾಣ ಮಾಡಿದ ಕೆರೆಗೆ ಕೆಎಂಎಫ್, ರಜತಗಿರಿ ಹಾಗೂ ಯಾಲಕ್ಕಪ್ಪಶೆಟ್ಟರ ಕಾಲನಿಯಿಂದ ಕೊಳಚೆ ನೀರು ಹರಿದು ಬರುತ್ತಾ ಇದೆ.

ನಗರ ಬೆಳೆದಂತೆ ಕೊಳಚೆ ನೀರು ಹರಿದು ಬರುವ ಪ್ರಮಾಣವು ಜಾಸ್ತಿಯಾಗುತ್ತಿದ್ದು, ಈ ನೀರಿನ ಬಳಕೆಯಾಗಬೇಕೆಂದು ಅಭಿವೃದ್ಧಿ ಕಾಮಗಾರಿಯನ್ನು ಮಾಡಲಾಗಿದೆ. ದನಕರುಗಳಿಗೆ ಕುಡಿಯುವುದಕ್ಕೆ ಯೋಗ್ಯವಾಗಿರಲಿಲ್ಲ ಈ ಕೆರೆ ನೀರು. ಬರೀ ಹುಳಗಳಿಂದ ಕೂಡಿ ಇಡೀ ಕೆರೆಯು ಮಾಲಿನ್ಯದಿಂದ ಕೂಡಿತ್ತು. ಕೊಳಚೆ ನೀರು ಹೊರ ಹೋಗುವಂತೆ ಹಾಗೂ ಈ ನೀರು ರೈತರಿಗೆ ಭೂಮಿಗೆ ಉಪಯೋಗಕ್ಕೆ ಬರುವಂತೆ ಪ್ರತ್ಯೇಕವಾದ ಬೈಪಾಸ್ ಕಾಲುವೆಯನ್ನು ನಿರ್ಮಿಸಲಾಗಿದೆ.

ಈ ಭಾಗದ ಜನರಿಗೆ ಇದು ಉಪಯುಕ್ತವಾಗಿದೆ. ಈ ವರ್ಷದ ಆರಂಭದಲ್ಲಿ ಕಲುಷಿತ ನೀರು ಬಂದಿದ್ದು, ಇನ್ನು ಮುಂದೆ ಹೀಗಾಗದಂತೆ ಮುಂಜಾಗ್ರತೆ ವಹಿಸಲಾಗುವುದು. ಕೆರೆಯ ಹೂಳನ್ನು ತೆಗೆಸಿ ಕೆರೆಯ ಕ್ಷೇತ್ರ ವಿಸ್ತಾರವಾಗುವಂತೆ ಮಾಡಿ ಮುಂದಿನ ವರ್ಷ ನೀರು ಸಂಗ್ರಹವಾಗಿ ಪೂರ್ಣ ಪ್ರಮಾಣದಲ್ಲಿ ತುಂಬಲು ಪ್ರಯತ್ನಿಸಲಾಗುವುದು. ಕೆರೆಯ ಅತಿಕ್ರಮಣವಾಗದಂತೆ ಕ್ರಮಕೈಕೊಳ್ಳಲಾಗಿದೆ. ಈ ಕೆರೆಯ ಸುಂದರವಾಗಬೇಕು ಹಾಗೂ ರೈತರಿಗೆ ಉಪಯೋಗಕ್ಕೆ ಬರಬೇಕೆಂಬುದೇ ಅಭಿವೃದ್ಧಿಯ ಉದ್ದೇಶ. ಈ ಕೊಳಚೆ ನೀರು ರೈತರ ಜಮೀನಿಗೆ ನೇರವಾಗಿ ಉಪಯೋಗಿಸಲಾಗುತ್ತಿದೆ. ಮುಖ್ಯಮಂತ್ರಿಗಳ 100 ಕೋಟಿ ರೂ.ಗಳ ಅನುದಾನದಡಿ ಜಿಲ್ಲಾಧಿಕಾರಿಗಳಿಂದ ಪಡೆದು ಈ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಚಂದ್ರಕಾಂತ ಬೆಲ್ಲದ ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X