• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆಂಡೂಲ್ಕರ್ ಗೆ ಭಾರತರತ್ನ ಸಿಗಲಿ: ಕಪಿಲ್ ದೇವ್

By Mahesh
|

ನವದೆಹಲಿ, ಫೆ. 26: ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜಗತ್ತಿನ 'ಕೊಹಿನೂರ್' ಎಂದು ಹೊಗಳಿದ ಕಪಿಲ್ ದೇವ್ ಅವರು ಸಚಿನ್ ಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಲಭಿಸಲಿ ಎಂದು ಹಾರೈಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾರೆಯಾಗಿ 31,041 ರನ್ ಗಳು ಹಾಗೂ 93 ಶತಕಗಳನ್ನು ಬಾರಿಸಿರುವ ಸಚಿನ್ ಸರ್ವಶ್ರೇಷ್ಠ. ಏಕದಿನ ಪಂದ್ಯದಲ್ಲಿ ಪ್ರಪ್ರಥಮ ದ್ವಿಶತಕ ಗಳಿಸಿದ ಕೀರ್ತಿಯನ್ನು ಹೊಂದಿದ್ದಾರೆ. ದಾಖಲೆಗಳಿಗಿಂತ ಸಚಿನ್ ಭಾರತದ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಕ್ರಿಕೆಟ್ ಕ್ಷೇತ್ರದಲ್ಲಿ ವಜ್ರದಂತೆ ಕಂಗೊಳಿಸುತ್ತಿದ್ದಾರೆ ಎಂದು ಕಪಿಲ್ ಹೇಳಿದರು.

ವಿಡಿಯೋ:ವಿಶ್ವದಾಖಲೆ ಸಾಧನೆ ಮೆರೆದ ಸಚಿನ್

ತೆಂಡೂಲ್ಕರ್ ಗೆ ಬೇರೆ ಯಾರೂ ಸಾಟಿಯಿಲ್ಲ. ದಾಖಲೆ ಮುರಿಯುವುದು ದೊಡ್ಡ ವಿಷಯವಲ್ಲ. ಆದರೆ, 20 ವರ್ಷಗಳ ಕಾಲ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಂಡು ಒಂದೇ ಲಯದಲ್ಲಿ ಆಡುತ್ತಿರುವ ಸಚಿನ್ ನಿಜಕ್ಕೂ ಅದ್ಭುತ ಎಂದು ಸ್ತುತಿಸಿದ ಅಜಿತ್ ವಾಡೇಕರ್, ಸಚಿನ್ ಗೆ ಭಾರತ ರತ್ನ ಸಿಗಲೇ ಬೇಕು ಎಂದು ಕಪಿಲ್ ಮಾತನ್ನು ಅನುಮೋದಿಸಿದರು.

ಸಚಿನ್ ತೆಂಡೂಲ್ಕರ್ ಗೆ 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಲಭಿಸಿದೆ.ಅಲ್ಲದೆ, ರಾಜೀವ್ ಗಾಂಧಿ ಖೇಲ್ ರತ್ನ ಹಾಗೂ ಅರ್ಜುನ ಪ್ರಶಸ್ತಿಗಳು ಸಂದಿವೆ. ಮಹಾರಾಷ್ಟ್ರ ರಾಜ್ಯದ ಅತ್ಯುನ್ನತ ಪ್ರಶಸ್ತಿ, ಮಧ್ಯಪ್ರದೇಶದ ಗೌರವಗಳು ಸಿಕ್ಕಿವೆ.ಇನ್ನುಳಿದಿರುವುದು ಭಾರತ ರತ್ನ ಮಾತ್ರ ಅದೂ ಆದಷ್ಟು ಬೇಗ ಸಿಗಲಿ ಎಂಬುದು ಅಭಿಮಾನಿಗಳ ಹಾರೈಕೆ.ಒಂದು ವೇಳೆ ಸಚಿನ್ ಗೆ ಭಾರತ ರತ್ನ ಲಭಿಸಿದರೆ, ಭಾರತದ ಅತ್ಯುನ್ನತ ಗೌರವ ಪಡೆದ ಮೊದಲ ಕ್ರೀಡಾಪಟು ಎನಿಸಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X