ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರವೇ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹ

By Mrutyunjaya Kalmat
|
Google Oneindia Kannada News

Karave
ಬೆಂಗಳೂರು, ಫೆ. 26 : ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಎಲ್ಲ ಕನ್ನಡಪರ ಸಂಘಟನೆಗಳ ಸದಸ್ಯರ ಮೇಲೆ ದಾಖಲಾಗಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕೆಂದು ಆಗ್ರಹಿಸಿ, ಕರವೇ ವಕೀಲರ ಘಟಕ ಗುರುವಾರ ಪ್ರತಿಭಟನೆ ನಡೆಸಿತು.

ಕಾನೂನು ಘಟಕದ ರಾಜ್ಯಾಧ್ಯಕ್ಷ ಪ್ರೊ.ಬಿ ಬಸವರಾಜು ನೇತೃತ್ವದಲ್ಲಿ ಎಂಜಿ ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ವಕೀಲರು ಸರಕಾರದ ವಿರುದ್ಧ ಘೋಷಣೆ ಕೂಗಿದರು. ಭಾಷೆ ಹಾಗೂ ನಾಡಿನ ಏಳಿಗೆಗೆ ಹಲವು ಹೋರಾಟ ನಡೆಸಿರುವ ಕರವೇ ಕಾರ್ಯಕರ್ತರ ಮೇಲೆ ಸರಕಾರ ಮೊಕದ್ದಮೆ ದಾಖಲಿಸಿರುವುದು ವಿಪರ್ಯಾಸ.

ಎಂಇಎಸ್ ಸಮ್ಮೇಳನ ಸಂದರ್ಭದಲ್ಲಿ ಕರವೇ ಕಾರ್ಯಕರ್ತರನ್ನು ಬಂಧಿಸಿರುವ ಸರಕಾರ, ತನ್ನ ಇಬ್ಬಂದಿ ನಿಲುವನ್ನು ತೋರಿದೆ ಎಂದು ದೂರಿದರು. ರಾಜ್ಯದ ಪರವಾಗಿ ಹೋರಾಟ ನಡೆಸುವವರಿಗೆ ಕರವೇ ಮತ್ತಿತರ ಸಂಘಟನೆಗಳು ನೈತಿಕ ಸ್ಥೈರ್ಯ ತುಂಬುತ್ತಿವೆ. ಹೀಗಾಗಿ, ಇಂಥ ಸಂಘಟನೆಗಳ ಮೇಲಿನ ಪ್ರಕರಣ ಗಳನ್ನು ವಾಪಸು ಪಡೆಯಬೇಕು ಎಂದು ಒತ್ತಾಯಿಸಿದರು.

ಕಾನೂನು ಘಟಕದ ಉಪಾಧ್ಯಕ್ಷರಾದ ಶ್ರೀನಿವಾಸ್, ಜಿ.ಅಶ್ವತ್ಥನಾರಾಯಣ, ಪ್ರಧಾನ ಕಾರ್ಯದರ್ಶಿ ಆರ್. ಸುರೇಶ್ ಮತ್ತಿತರರು ಪಾಲ್ಗೊಂಡಿದ್ದರು. ಮೊಕದ್ದಮೆ ಹಿಂಪಡೆಯಲು ಆಗ್ರಹ ಕನ್ನಡಪರ ಸಂಘಟನೆಗಳ ಮೇಲಿನ ಮೊಕದ್ದಮೆ ಹಿಂಪಡೆಯಬೇಕೆಂದು ಒತ್ತಾಯಿಸಿ, ಕರವೇ ಕಾನೂನು ಘಟಕದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X