ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆಯ ಪರಿಣಾಮ!

By Prasad
|
Google Oneindia Kannada News

Impact of petrol and diesel price hike on Karnataka
ಬೆಂಗಳೂರು, ಫೆ. 26 : ವಿತ್ತ ಸಚಿವ ಪ್ರಣಬ್ ಮುಖರ್ಜಿ ಮಂಡಿಸಿರುವ 2010 ಮತ್ತು 2011ನೇ ಸಾಲಿನ ಮುಂಗಡ ಪತ್ರಕ್ಕೆ ರಾಜಕೀಯ ಮತ್ತು ಸಾರ್ವಜನಿಕ ವಲಯಗಳಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿವೆ. ದೇಶ ಆರ್ಥಿಕ ಪಥದತ್ತ ಮುನ್ನಡೆಯಲಿದೆ ಎಂದು ಪ್ರಧಾನಿ ಮುಖರ್ಜಿಯ ಬೆನ್ನುತಟ್ಟಿದ್ದರೆ, ವಿರೋಧಪಕ್ಷಗಳು ತೈಲೋತ್ಪನ್ನ ಬೆಲೆ ಏರಿಕೆಯ ವಿರುದ್ಧ ಯುದ್ಧ ಸಾರಿವೆ.

ವಾರ್ಷಿಕ ವಿತ್ತೀಯ ಕೊರತೆಯನ್ನು ಶೇ.6.8ರಿಂದ ಶೇ.5.5ಕ್ಕೆ ಇಳಿಸಿದ್ದು ಆರ್ಥಿಕ ಹೊಡೆತದಿಂದ ಜರ್ಜರಿತವಾದ ಭಾರತ ಆರ್ಥಿಕ ಅಭಿವೃದ್ಧಿ ಕಾಣಲು ಸಾಧ್ಯವಿದೆ ಎಂದು ಇನ್ಫೋಸಿಸ್ ನ ಸಿಇಓ ಗೋಪಾಲಕೃಷ್ಣನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆರೆ ಪರಿಹಾರದ ಬಗ್ಗೆ ಪ್ರಸ್ತಾಪ ಮಾಡದ ಬಗ್ಗೆ ಮುಖ್ಯಮಂತ್ರಿ ಬಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೂರಗಾಮಿ ಪರಿಣಾಮಗಳನ್ನು ಬದಿಗಿಟ್ಟು, ಕೇವಲ ತೈಲೋತ್ಪನ್ನಗಳ ಬೆಲೆ ಏರಿಕೆಯಿಂದ ಕರ್ನಾಟಕ ರಾಜ್ಯದ ಮೇಲಾಗುವ ಪರಿಣಾಮಗಳೇನೆಂಬದನ್ನು ಗಮನಿಸೋಣ.

* ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಗೆ 2.67 ರು. ಹಾಗೂ ಡಿಸೇಲ್ ಗೆ 2.58 ರು. ಏರಿರುವುದರಿಂದ ರಾಜ್ಯದಲ್ಲಿ ಕನಿಷ್ಠ 4ರಿಂದ 5 ರು. ಬೆಲೆ ಏರಿಕೆ ಕಂಡುಬರಲಿದೆ.
* ಈ ಏರಿಕೆ ಫೆ.26ರ ಮಧ್ಯರಾತ್ರಿಯಿಂದಲೇ ಜಾರಿ ಬರುವ ಸಾಧ್ಯತೆಯಿದೆ.
* ದರ ಏರಿಕೆಯಾಗುವವರೆಗೆ ಬಂಕ್ ಗಳಲ್ಲಿ 'ನೋ ಸ್ಟಾಕ್'.
* ಸಾರಿಗೆ ಇಲಾಖೆ ಈಗಾಗಲೆ ಪ್ರಯಾಣ ದರವನ್ನು ಏರಿಸುವ ಸೂಚನೆ ನೀಡಿದೆ.
* ಸರಕು ಸಾಗಣೆ ಮತ್ತಷ್ಟು ತುಟ್ಟಿಯಾಗಲಿದೆ.
* ಮೊದಲೇ ಏರುಮುಖವಾಗಿರುವ ಹಣ್ಣು, ತರಕಾರಿ ಬೆಲೆ ಆಕಾಶ ಮುಟ್ಟಲಿದೆ.
* ಆಹಾರ ಧಾನ್ಯಗಳ ಬೆಲೆ ಕೂಡ ಹೆಚ್ಚಳವಾಗಲಿದೆ.
* ಹಾಲಿನ ದರ ಏರಿಸುವುದು ಅನಿವಾರ್ಯ.
* ಬೆಲೆ ಏರಿಕೆಯಿಂದ ಜರ್ಜರಿತವಾಗಿರುವ ಗ್ರಾಹಕನಿಗೆ ಮತ್ತಷ್ಟು ಬರೆ.

ಈ ಬೆಲೆ ಏರಿಕೆ ಬಿಸಿಯಿಂದ ಶ್ರೀಸಾಮಾನ್ಯರು ತಪ್ಪಿಸಿಕೊಳ್ಳುವ ಬಗೆಯಾದರೂ ಹೇಗೆ? ನಮಗೆ ಬರೆದು ತಿಳಿಸಿ.

2010ರ ಕೇಂದ್ರ ಬಜೆಟ್ ನ ಮುಖ್ಯಾಂಶಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X