ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಶಾಸಕ

By Mrutyunjaya Kalmat
|
Google Oneindia Kannada News

ಪಾಟ್ನಾ, ಫೆ. 26 : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಡಳಿತರೂಢ ಜೆಡಿಯು ಶಾಸಕನೊಬ್ಬ ಸಚಿವರೊಬ್ಬರ ನಿವಾಸದಲ್ಲಿ ಪತ್ನಿ ಮತ್ತು ಆರು ತಿಂಗಳ ಹಸುಳೆಯನ್ನು ಹತ್ಯೆಗೈದು ಕೊನೆಗೆ ತಾನು ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪಾಟ್ನಾದಲ್ಲಿ ನಡೆದಿದೆ.

ಬಿಹಾರ ಸರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ನರೇಂದ್ರ ಸಿಂಗ್ ಅವರ ಕಚೇರಿ ನಿವಾಸದಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆ ತಿಳಿದ ಸಚಿವ ನರೇಂದ್ರ ಸಿಂಗ್ ತೀವ್ರ ಅಸ್ವಸ್ಥಗೊಂಡಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಸಚಿವರು ಬಳಲುತ್ತಿದ್ದು, ಪಾಟ್ನಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಜಾಮಾಯಿ ಕ್ಷೇತ್ರದ ಶಾಸಕ ಅಭಯಸಿಂಗ್ ಪತ್ನಿ ಮತ್ತು ಆರು ತಿಂಗಳ ಮಗುವನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ರಾತ್ರಿ ಶಾಸಕ ಮತ್ತು ಆತನ ಪತ್ನಿ ರಾತ್ರಿ 2 ಗಂಟೆವರೆಗೂ ಜಗಳ ಮಾಡಿಕೊಂಡಿದ್ದೇ ಈ ದುರ್ಘಟನೆ ಸಂಭವಿಸಲು ಕಾರಣವಾಗಿದೆ. ಘಟನೆಗೆ ಸ್ಪಷ್ಟಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X