ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತರಬೇತುಗಾರ್ತಿಯನ್ನು ಬಲಿ ತೆಗೆದುಕೊಂಡ ತಿಮಿಂಗಲ

By Prasad
|
Google Oneindia Kannada News

Killer whale Tilikum at SeaWorld Park, Orlando
ಆರ್ಲ್ಯಾಂಡೋ, ಫೆ. 25 : ಫ್ಲೋರಿಡಾದ ಆರ್ಲ್ಯಾಂಡೋದಲ್ಲಿರುವ ಜಲಚರಗಳ ಸೀವರ್ಲ್ಡ್ ಪಾರ್ಕ್ ನಲ್ಲಿ 40 ವರ್ಷದ ಮಹಿಳಾ ತರಬೇತುಗಾರ್ತಿಯನ್ನು ತಿಮಿಂಗಲ ಪ್ರೇಕ್ಷಕರೆದುರಿನಲ್ಲೇ ಬಲಿತೆಗೆದುಕೊಂಡಿದೆ.

ಪಾರ್ಕ್ ನ ಅತ್ಯಂತ ಪರಿಣಿತ ತರಬೇತುಗಾರ್ತಿ ಡಾನ್ ಬ್ರಾಂಚೂ ಅವರು ಐದುವರೆ ಸಾವಿರ ಕಿಲೋ ತೂಗುವ, ಟಿಲಿಕುಂ ಅಂದರೆ ಸ್ನೇಹಿತ ಎಂಬ ಹೆಸರಿನ, ತಿಮಿಂಗಲವನ್ನು ಮುದ್ದಿಸುತ್ತಿದ್ದಾಗ ಆಕೆಯ ಸೊಂಟವನ್ನು ಕಚ್ಚಿ ನೀರಿನ ಕೊಳಕ್ಕೆ ಎಳೆದೊಯ್ದು ಕೊಂದು ಹಾಕಿತು.

ಆಕೆ ಮುಳುಗಿ ಸತ್ತಿದ್ದಾಳೆಯೋ ಅಥವಾ ತಿಮಿಂಗಲ ಕಚ್ಚಿದ್ದರಿಂದ ಸತ್ತಿದ್ದಾಳೆಯೋ ಎಂಬುದು ತಿಳಿದುಬಂದಿಲ್ಲ. ದಿಗ್ಭ್ರಾಂತರಾದ ಪ್ರೇಕ್ಷಕರನ್ನು ಕೂಡಲೇ ಪಾರ್ಕಿನಿಂದ ಹೊರಕಳುಹಿಸಲಾಯಿತು ಮತ್ತು ಮನರಂಜನಾ ಪಾರ್ಕನ್ನು ಕೂಡಲೇ ಮುಚ್ಚಲಾಯಿತು.

ಅಗಾಧ ಗಾತ್ರದ ಮೂವತ್ತು ವರ್ಷದ ಟಿಲಿಕುಂ ಹಿಂದೆ ಕೂಡ ಇಬ್ಬರನ್ನು ಬಲಿತೆಗೆದುಕೊಂಡಿದೆ. 1991ರಲ್ಲಿ ಒಬ್ಬ ತರಬೇತುಗಾರ್ತಿಯನ್ನು ಆಯತಪ್ಪಿ ಆಕೆ ನೀರಿಗೆ ಬಿದ್ದಾಗ ಸಾಯಿಸಿತ್ತು. 1999ರಲ್ಲಿ ಮತ್ತೊಬ್ಬ ಪುರುಷನನ್ನು ಹೀಗೆಯೇ ಕೊಂದುಹಾಕಿತ್ತು. ಹೀಗಾಗಿ ತರಬೇತುಗಾರರಿಗೆ ನೀರಿನಲ್ಲಿಳಿಯಲು ಅವಕಾಶ ನೀಡಲಾಗುತ್ತಿರಲಿಲ್ಲ. ಆದರೆ, ಬ್ರಾಂಚೂ ಎಲ್ಲರಿಗಿಂತ ಪರಿಣಿತಳಾಗಿದ್ದರಿಂದ ತಿಮಿಂಗಲದ ಹತ್ತಿರ ಹೋಗುತ್ತಿದ್ದರು.

ಟಿಲಿಕುಂನ ಈ ವರ್ತನೆ ಇತ್ತೀಚೆಗೆ ವಿಚಿತ್ರವಾಗಿತ್ತೆಂದು ಕೆಲವರು ಹೇಳಿದ್ದಾರೆ. ಹಿಂದೆ ಕೂಡ ತರಬೇತುಗಾರರು ನೀಡುವ ಆದೇಶಗಳನ್ನು ಟಿಲಿಕುಂ ಸರಿಯಾಗಿ ಪಾಲಿಸುತ್ತಿರಲಿಲ್ಲ ಮತ್ತು ವಿಚಿತ್ರವಾಗಿ ವರ್ತಿಸುತ್ತಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X