ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆ.27ಕ್ಕೆ ಚಂಪಾಗೆ 70, ಸಂಕ್ರಮಣಕ್ಕೆ 45

By Mrutyunjaya Kalmat
|
Google Oneindia Kannada News

Champa along with mates
ಬೆಂಗಳೂರು, ಫೆ. 25 : ವಿಚಾರವಾದಿ, ಬಂಡಾಯಸಾಹಿತಿ ಹಾಗೂ ಕನ್ನಡಪರ ಚಿಂತಕ ಚಂದ್ರಶೇಖರ ಪಾಟೀಲ್ ಅವರಿಗೀಗ 70 ವರ್ಷ. ಅವರ 'ಸಂಕ್ರಮಣ ಪತ್ರಿಕೆ'ಗೆ 45ರ ಸಂಭ್ರಮ. ಈ ಹಿನ್ನೆಲೆಯಲ್ಲಿ ಸ್ವಾಭಿಮಾನಿ ಕರ್ನಾಟಕ ವೇದಿಕೆ 'ಚಂಪಾ 70 ಸಂಕ್ರಮಣ 45' ಎನ್ನುವ ಕಾರ್ಯಕ್ರಮವನ್ನು ಆಯೋಜಿಸಿ ಚಂಪಾ ಅವರಿಗೆ ಅಭಿನಂದನೆ ಸಲ್ಲಿಸಲಿದೆ.

ಫೆ. 27 ರಂದು ಶನಿವಾರ ಸಂಜೆ ಜೆಸಿ ರಸ್ತೆಯ ನಯನ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಎಂ ಪಿ ಪ್ರಕಾಶ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಕಾರ್ಯದರ್ಶಿ ಮನು ಬಳಿಗಾರ ಸಂಕ್ರಮಣ 45ರ ಸಂಚಿಕೆ ಬಿಡುಗಡೆ ಮಾಡುವರು. ಪತ್ರಕರ್ತೆ ಗೌರಿ ಲಂಕೇಶ್, ಅಭಿನಂದನಾ ಭಾಷಣ ಮಾಡುವರು. ಪತ್ರಕರ್ತ ರವಿ ಬೆಳೆಗೆರೆ, ಎಲ್ ಹನುಮಂತಯ್ಯ, ಬಂಜಗೆರೆ ಜಯಪ್ರಕಾಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X