ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ್ಜಾಲ ಅಂಗಳಕ್ಕೆ ಶೋಭಾ ಕರಂದ್ಲಾಜೆ

By Shami
|
Google Oneindia Kannada News

Shobha Karandlaje now online
"ನಾನು ಶೋಭಾ ಕರಂದ್ಲಾಜೆ, ನೀವೆಲ್ಲರೂ ನನ್ನನ್ನು ಶೋಭ ಅಂತ ಕರೆಯಬಹುದು. ನನ್ನನ್ನು ನನ್ನ ಮನೆಯಲ್ಲಿ ಮತ್ತು ಊರಿನಲ್ಲಿ "ಬೇಬಿ" ಅಂತ ಕರಿತಾರೆ, ಆ ಊರಿಗೆ ನಾನು "ಬೇಬಿ"ಯಾಗಿರುವುದೇ ನನಗೆ ಇಷ್ಟ. ಅಷ್ಟು ಮುಗ್ದ ಜನ ನನ್ನ ಊರಿನವರು ಮತ್ತು ಮನೆಯವರು, ನನ್ನ ಊರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಚಾರ್ವಾಕ ಅನ್ನುವ ಪುಟ್ಟ ಗ್ರಾಮ. ಕಾಡು, ಬೆಟ್ಟ, ಗುಡ್ಡದ ಪ್ರದೇಶ. ಕೃಷಿಯೇ ನಮ್ಮೂರಿನ ಜೀವನಾಧಾರ. ಅಡಿಕೆ, ತೆಂಗು, ಗೇರು, ಕರಿಮೆಣಸು, ಪ್ರಮುಖ ಬೆಳೆಗಳು. ನಾನು ಹುಟ್ಟುವ ಕಾಲಕ್ಕೇನೇ ನಾವು ಅಡಿಕೆ, ತೆಂಗು ಬೆಳೆಯುತ್ತಿದ್ದೆವು. ನಮ್ಮದು ಮಧ್ಯಮ ವರ್ಗದ ಕುಟುಂಬ, ನನ್ನ ಹಿರಿಯರು ಕೃಷಿಕ ಕುಟುಂಬದವರು"...

ಈ ಒಕ್ಕಣಿಕೆಯಿಂದ ಆರಂಭವಾಗುವ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರ about Usನಲ್ಲಿ ಹೇಳಿರುವಂತೆ..

"...ಅಧಿಕಾರ ಕಳೆದುಕೊಂಡ ಮೇಲೆ ರಾಜ್ಯದ ಜನ ಅಪಾರವಾದ ಪ್ರೀತಿ, ವಿಶ್ವಾಸ, ಅನುಕಂಪವನ್ನು ತೋರುತ್ತಿದ್ದೀರಿ. ಮಾಧ್ಯಮದ ಎಲ್ಲಾ ಬಂಧುಗಳು ಪ್ರೀತಿ ತೋರುತ್ತಿದ್ದಾರೆ. ನಿಮ್ಮೆಲ್ಲರಿಗೂ ನನ್ನ ಶತಶತ ನಮನಗಳು. ನಿಮ್ಮ ಪ್ರೀತಿ, ವಿಶ್ವಾಸವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ನಿಮ್ಮ ಸಲಹೆ, ಸಹಕಾರ ಹೀಗೇನೇ ಇರಲಿ ಎಂದು ನನ್ನ ವಿನಂತಿ. ಹಾಗೇನೆ ನಿಮ್ಮ ಸಲಹೆಗಳನ್ನು ನನಗೆ ತಿಳಿಸಿ."

ಇಂತಿ ನಿಮ್ಮವಳೇ,
ಶೋಭ

ಎಂಬಲ್ಲಿಯವರೆಗೆ ಮುಕ್ತಾಯವಾಗುತ್ತದೆ. ತಮ್ಮ ಹಿನ್ನೆಲೆ, ನನಸಾದ ಕನಸುಗಳು, ಮಾಡಬೇಕಾದ ಕೆಲಸಗಳು ಮತ್ತೆಲ್ಲ ಮಾಹಿತಿ, ವಿಚಾರಗಳನ್ನು ಜನತೆಯ ಮುಂದೆ ತೆರೆದಿಡುವ ಶೋಭಾ ಕರಂದ್ಲಾಜೆ ಅವರ ಅಂತರ್ಜಾಲ ತಾಣ 25 ಫೆಬ್ರವರಿ ಗುರುವಾರ ಸಂಜೆ 5 ಗಂಟೆಗೆ ಬೆಂಗಳೂರಿನಲ್ಲಿ ಉದ್ಘಾಟನೆ ಆಯಿತು. ತಮ್ಮ ವಿಧಾನಸಭಾ ಕ್ಷೇತ್ರ ಯಶವಂತಪುರ ಮೊದಲುಗೊಂಡಂತೆ ಇನ್ನಿತರ ಹಲಕೆಲವು ಮಾಹಿತಿಗಳನ್ನು ಒಳಗೊಂಡ ಅವರ ವೆಬ್ ವಿಳಾಸ ಇಂತಿದೆ. ನೋಡಿ : http://www.shobhakarandlaje.com/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X