ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಬಜೆಟ್ : ಪ್ರಯಾಣ ದರ ಹೆಚ್ಚಳ ಸಾಧ್ಯತೆಯಿಲ್ಲ

By Mahesh
|
Google Oneindia Kannada News

Mamata Bannerjee
ನವದೆಹಲಿ, ಫೆ, 24 : ಕೇಂದ್ರ ಯುಪಿಎ ಸರ್ಕಾರದ ಎರಡನೇ ರೈಲ್ವೆ ಬಜೆಟ್ ಮಂಡನೆಗೆ ದಿಲ್ಲಿಯಲ್ಲಿ ವೇದಿಕೆ ಸಜ್ಜಾಗಿದ್ದು, ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಬುಧವಾರ ಸತತ ಎರಡನೇ ಬಾರಿ ಬಜೆಟ್ ಮಂಡಿಸಲಿದ್ದಾರೆ. ಮುಂಬರುವ ಬಿಹಾರ ಹಾಗೂ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಹಾಗೂ ಜನ ಸಾಮಾನ್ಯರ ಹಿತವನ್ನು ಗಮನದಲ್ಲಿರಿಸಿಕೊಂಡು ಮಮತಾ ಈ ಬಾರಿಯೂ ಆಮ್ -ಆದ್ಮಿ ಬಜೆಟ್ ನೀಡಲಿದ್ದಾರೆಂಬ ನಿರೀಕ್ಷೆ ಯಿದೆ.

ಸಾಧ್ಯತೆಗಳು, ಘೋಷಣೆಗಳು, ಭರವಸೆಗಳು:
*ಒಂದು ಡಜನ್ ತಡೆರಹಿತ ತುರಂತ್ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ನೀಡುವ ಸಾಧ್ಯತೆ.
*ರೈಲ್ವೇ ಭದ್ರತಾ ನಿಧಿಯೊಂದರ ಸ್ಥಾಪನೆಗೆ ಮಮತಾ ಒಲವು.
*ಪ್ರಯಾಣದರಗಳನ್ನು ಹೆಚ್ಚಿಸುವ ಸಾಧ್ಯತೆಗಳು ಕಂಡುಬರುತ್ತಿಲ್ಲ ಎಂದು ರೈಲ್ವೆ ಭವನ ಮೂಲಗಳ ವರದಿ
*7 ವರ್ಷ ಇತಿಹಾಸ ರೈಲ್ವೆ ಸಚಿವಾಲಯವು ಪ್ರಯಾಣದರಗಳನ್ನು ಪರಿಷ್ಕರಿಸಬೇಕಾದ ಒತ್ತಡದಲ್ಲಿದ್ದರೂ, ಶ್ರೀಸಾಮಾನ್ಯನ ಮೇಲೆ ಯಾವುದೇ ಹೊರೆಯನ್ನು ಹೊರಿಸದಿರಲು ಮಮತಾ ನಿರ್ಧಾರ.
*ಕಬ್ಬಿಣದ ಅದಿರು ಮತ್ತು ಸಿಮೆಂಟ್‌ನಂತಹ ಕೆಲವು ಆಯ್ದ ಸರಕುಗಳ ಸಾಗಣೆ ವೆಚ್ಚದಲ್ಲಿ ಏರಿಕೆಯಾಗಲಿದೆ.
*ಆಹಾರ ಧಾನ್ಯಗಳ ಸಾಗಣೆಯ ವೆಚ್ಚವನ್ನು ಹೆಚ್ಚಿಸಿದರೆ ಅದು ಆಹಾರ ಹಣದುಬ್ಬರ ಏರಿಕೆಗೆ ಕಾರಣವಾಗುವುದರಿಂದ ಸಾಗಣೆ ವೆಚ್ಚ ಕಡಿವಾಣ ಹಾಕುವ ಸಾಧ್ಯತೆಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X