ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಟ್ಟೆ ತಿಂದರೆ ಭ್ರೂಣ ಹತ್ಯೆ ಮಾಡಿದಂತೆ

By Mrutyunjaya Kalmat
|
Google Oneindia Kannada News

Maneka Gandhi
ಬೆಂಗಳೂರು, ಫೆ. 23 : ಆಕಳು, ಮೇಕೆ ಸೇರಿದಂತೆ ಇತರ ಪ್ರಾಣಿಗಳ ಹಾಲನ್ನು ಮತ್ತು ಕೋಳಿ ಮೊಟ್ಟೆಯನ್ನು ಸಾರ್ವಜನಿಕರು ನಿಲ್ಲಸಬೇಕು. ಅವುಗಳ ಸೇವನೆ ಪ್ರಾಣಿಹಿಂಸೆಗೆ ಸಮಾನ ಎಂದು ಸಂಸದೆ ಹಾಗೂ ಪೀಪಲ್ಸ್ ಫಾರ್ ಎನಿಮಲ್ಸ್ ಸಂಸ್ಥಾಪಕಿ ಮನೇಕಾ ಗಾಂಧಿ ಹೇಳಿದ್ದಾರೆ.

ಕೆಂಗೇರಿ ಸಮೀಪದ ಪಿಎಫ್ಎ ಕೇಂದ್ರದ ಆವರಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಿಎಫ್ಎ ಜ್ಞಾನ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಹಾಲು ಮತ್ತು ಮೊಟ್ಟೆಯನ್ನು ನಾನು ಸೇವಿಸುವುದಿಲ್ಲ. ಅವುಗಳನ್ನು ಸೇವಿಸದಂತೆ ಬೇರೆಯವರಿಗೆ ನಾನು ತಿಳಿ ಹೇಳುತ್ತೇನೆ ಎಂದರು. ಪ್ರಾಣಿಗಳ ರಕ್ತದ ಜೊತೆ ಬರುವ ಬಿಳಿ ದ್ರವ್ಯ ಅದರ ಸೇವನೆಯಿಂದ ಅನಾರೋಗ್ಯ ಮತ್ತು ಅಜೀರ್ಣ ಉಂಟಾಗುತ್ತದೆ. ಮೊಟ್ಟೆ ಸೇವನೆ ಭ್ರೂಣ ಹತ್ಯೆಗೆ ಸಮಾನ. ಜನ್ಮ ತಳಿಯಬೇಕಿದ್ದ ಕೋಳಿಯನ್ನು ಕೊಲೆ ಮಾಡಿದಂತೆ ಎಂದು ಮನೇಕಾ ಗಾಂಧಿ ವಿವರಿಸಿದರು.

ಪಶ್ಚಿಮ ಘಟ್ಟದಲ್ಲಿ ಗಣಿಗಾರಿಕೆ ಕೈಗೊಳ್ಳಲು ರಾಜ್ಯ ಸರಕಾರ ಅನುಮತಿ ನೀಡಬಾರದು. ಪಶ್ಚಿಮ ಘಟ್ಟ ಪ್ರದೇಶದಲ್ಲಿ ವಿವಿಧ ಬಗೆಯ ಪ್ರಾಣಿಗಳಿವೆ. ಅಮೂಲ್ಯ ಸಂಪತ್ತು, ಸಂಪನ್ಮೂಲಗಳಿವೆ. ಅವುಗಳನ್ನು ನಾಶಪಡಿಸಲು ಮತ್ತು ಗಣಿಗಾರಿಕೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X