ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಕ್ಕಾಗಳು ಯಾವ ಇಲಾಖೆಯಡಿ ಬರುತ್ತಾರೆ?

By Shami
|
Google Oneindia Kannada News

Eunuchs
ಬೆಂಗಳೂರು, ಫೆ 23 : ಬೆಂಗಳೂರು ನಗರವನ್ನು ಭಿಕ್ಷುಕ ಮುಕ್ತ ನಗರವಾಗಿರಿಸಲು ರಾಜ್ಯ ಸರಕಾರ ಭಿಕ್ಷಾಟನಾ ಮಾಸ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಸೋಮವಾರ ಭಿಕ್ಷೆ ನಿರ್ಮೂಲನ ಮಾಸವನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸುಧಾಕರ್, ಭಿಕ್ಷಾಟನೆಯಲ್ಲಿ ತೊಡಗಿರುವ ಮಂಗಳಮುಖಿಯರನ್ನು ಬಂಧಿಸಿ ಶಿಕ್ಷೆಗೆ ಗುರಿ ಪಡಿಸಲು ಸರಕಾರ ಗಂಭೀರ ಚಿಂತನೆ ನಡೆಸಿದೆ ಎಂದು ತಿಳಿಸಿದ್ದಾರೆ.

ಮಂಗಳಮುಖಿಯರ ಬಂಧನಕ್ಕೆ ಕಾನೂನಿನಲ್ಲಿ ತೊಡಕಿದೆ. ಇವರು ಯಾವ ಇಲಾಖೆ ಅಡಿ ಬರುತ್ತಾರೆ ಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ಆದಾಗ್ಯೂ ಭಿಕ್ಷಾಟನೆ ನಿರ್ಮೂಲನೆಯ ನಿಟ್ಟಿನಲ್ಲಿ ಇವರನ್ನು ಬಂಧಿಸುವುದು ಅನಿವಾರ್ಯ ಎಂದು ಸಚಿವರು ಅಭಿಪ್ರಾಯ ಪಟ್ಟಿದ್ದಾರೆ. ಚಕ್ಕಾಗಳ ಹಾವಳಿ ತಡೆಗಟ್ಟುವುದಕ್ಕೆ ಮತ್ತು ಅವರ ಬಾಳಿಗೊಂದು ದಾರಿತೋರಿಸುವುದಕ್ಕೆ ಪ್ರತ್ಯೇಕವಾದ ಒಂದು ಇಲಾಖೆ ತೆರೆಯಬೇಕೆಂದು ದಟ್ಸ್ ಕನ್ನಡ ಸಲಹೆ ಮಾಡುತ್ತದೆ.

ನಗರದಲ್ಲಿ ಭಿಕ್ಷುಕರನ್ನು ಬಂಧಿಸಲು ಎಂಟು ವಾಹನಗಳನ್ನು ನೀಡಲಾಗಿದೆ. ಮೆಜಿಸ್ಟಿಕ್, ಮಾರುಕಟ್ಟೆ, ಕೋರಮಂಗಲ,ವಿಜಯನಗರ, ಅತ್ತಿಗುಪ್ಪೆ, ಬಸವವನಗುಡಿ, ಕಾಮಾಕ್ಯ, ಪೀಣ್ಯ ಸೇರಿದಂತೆ ಹಲವು ತಾಣಗಳಲ್ಲಿ ಸುತ್ತಾಡಿ ಭಿಕ್ಷುಕರನ್ನು ಹಿಡಿದು ಪುನರ್ವಸತಿ ಕೇಂದ್ರಕ್ಕೆ ಕರೆತರಲಾಗುವುದು. ಇಲ್ಲಿ ಎರಡು ಸಾವಿರ ಮಂದಿಗೆ ಸ್ಥಳಾವಕಾಶವಿದೆ. ಸದ್ಯ 1100 ಮಂದಿ ಇದ್ದಾರೆ, ಸಂಖ್ಯೆ ಹೆಚ್ಚಾದರೆ ನಗರಕ್ಕೆ ಸಮೀಪದಲ್ಲಿರುವ ಇತರ ಪುನರ್ವಸತಿ ಕೇಂದ್ರಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸುಧಾಕರ್ ಹೇಳಿದ್ದಾರೆ.

ನಗರದಲ್ಲಿ ಹಿಜಡಾಗಳ ಹಾವಳಿ ಇತ್ತೀಚೆಗೆ ಅತಿಯಾಗಿದೆ. ಟ್ರಾಫಿಕ್ ಸಿಗ್ನಲ್ ಬಳಿ ಇವರ ಕಾಟ ಅಷ್ಟಿಟ್ಟಲ್ಲ. ಆಟೋ ಚಾಲಕರನ್ನು ನಿತ್ಯ ಸುಲಿಗೆ ಮಾಡುವುದು, ದ್ವಿಚಕ್ರವಾಹನ ಚಾಲಕರನ್ನು ಪೀಡಿಸಿ ಗೋಳುಹುಯ್ದುಕೊಳ್ಳುವುದು ನಿತ್ಯ ಅವ್ಯಾಹತವಾಗಿ ನಡೆಯುತ್ತಿದೆ. ಕುಂಟರು ಕುರುಡರು ಕಡುಬಡವ ಮುದುಕರಿಗೆ ನಾಕಾಣೆ ಭಿಕ್ಷೆ ಹಾಕುವುದು ಒಂದು ರೀತಿ , ಒಂದು ನೀತಿ. ಆದರೆ, ಚಿನ್ನಾರಿ ಮೆತ್ತಿಕೊಂಡ ಬಣ್ಣಬಣ್ಣದ ಸೀರೆ, ಚೂಡಿದಾರ್ ಗಳನ್ನು ಧರಿಸಿ, ಲೋಲಾಕುಗಳನ್ನು ಇಳಿಬಿಟ್ಟುಕೊಂಡು, ನವವಧುವಿನಂತೆ ನೆಕ್ ಲೇಸು, ಕನಕಾಂಬರ ಹೂವು ಮುಡಿದುಕೊಂಡು ಭಿಕ್ಷೆಯ ಹೆಸರಲ್ಲಿ ವಯ್ಯಾರದಿಂದ ಸುಲಿಗೆ ಮಾಡುವ ಚಕ್ಕಗಳನ್ನು ಅರೆಸ್ಟ್ ಮಾಡುವ ಸಚಿವ ಸುಧಾಕರ್ ಅವರ ಚಿಂತನೆ ಸರಿಯಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X