ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮಾಯಿಸಿದ ಜನ, ತಡಬಂದ ಅಗ್ನಿಶಾಮಕ ದಳ

By Prasad
|
Google Oneindia Kannada News

Onlookers infront of Carlton tower (Photo by Kiran)
ಬೆಂಗಳೂರು, ಫೆ. 23 : ಹಳೇ ಏರ್ಪೋಟ್ ರಸ್ತೆಯಲ್ಲಿನ ಕಾರ್ಲಟನ್ ಕಟ್ಟಡದಲ್ಲಿ ಬೆಂಕಿ ಹತ್ತಿದೆಯೆಂದು ತಿಳಿಯುತ್ತಿದ್ದಂತೆಯೇ ನೂರಾರು ಜನ ಅಲ್ಲಿ ಜಮಾಯಿಸಿದ್ದಾರೆ. ಇದರಿಂದಾಗಿ ಅಗ್ನಿಶಾಮಕ ದಳ ಬರಲು ಅರ್ಧಗಂಟೆ ತಡವಾಗಿದೆ. ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಜನ ಅಲ್ಲಿ ಸೇರಿದ್ದರಿಂದ ರಕ್ಷಣಾ ಕಾರ್ಯ ಕುಂಠಿತವಾಯಿತು ಮತ್ತು ವಿಪರೀತ ವಾಹನ ದಟ್ಟಣೆ ಉಂಟಾಯಿತು.

ಸ್ಥಳಕ್ಕೆ ಆಗಮಿಸುತ್ತಿದ್ದಂತೆ ಕೂಡಲೆ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದವರು ಕಟ್ಟಡದಲ್ಲಿ ಸಿಲುಕಿದ್ದ ಎಲ್ಲರನ್ನೂ ಪಾರು ಮಾಡಿದ್ದಾರೆ. ಕಟ್ಟಡದ ಮೇಲಿಂದ ಜಿಗಿದವರು, ದಟ್ಟ ಹೊಗೆ ಆವರಿಸಿದ್ದರಿಂದ ಉಸಿರುಗಟ್ಟಿ ಪ್ರಜ್ಞೆ ತಪ್ಪಿದ ಸುಮಾರು ಐವತ್ತು ಜನರನ್ನು ಕೂಗಳತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಅನಾಹುತ ಸಂಭವಿಸುತ್ತಿದ್ದಂತೆ ಜನ ಗೊಂದಲಕ್ಕೀಡಾಗಿದ್ದಾರೆ. ಅವರಿಗೆ ರಕ್ಷಣಾ ಹೊರದಾರಿ ತಿಳಿದಿಲ್ಲದ್ದರಿಂದ ಎಲ್ಲರೂ ಲಿಫ್ಟ್ ನತ್ತ ಧಾವಿಸಿದ್ದಾರೆ. ಲಿಫ್ಟ್ ಕೂಡ ಬೆಂಕಿಗೆ ಆಹುತಿಯಾಗಿ ಕೆಟ್ಟಿದ್ದರಿಂದ ಹೊರಬರಲಾರದೆ ಅಲ್ಲಿಯೇ ಸಿಲುಕಿದ್ದಾರೆ. ಬೆಂಕಿಯ ಕೆನ್ನಾಲಗೆ ಹಬ್ಬುತ್ತಿದ್ದಂತೆ ಹೆದರಿದ ಕೆಲವರು ಮೇಲ್ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ. ಆದರೆ, ಅಗ್ನಿಶಾಮಕ ದಳ ವಿನಂತಿಸಿದ್ದರಿಂದ ಉಳಿದವರು ಅಲ್ಲಿಯೇ ಉಳಿದಿದ್ದಾರೆ.

ಕಟ್ಟಡದ ಎಲ್ಲ ಗಾಜಿನ ಕಿಟಕಿಗಳನ್ನು ಪುಡಿ ಮಾಡಿ ತಲೆ ಹೊರಹಾಕಿ ಉಸಿರುಗಟ್ಟಲಾಗದಂತೆ ಮಾಡಿದ್ದರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X