ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧುಮೇಹಿಗಳೆ ಈ ಮಾತ್ರೆ ಸೇವಿಸಬೇಡಿ

By Mrutyunjaya Kalmat
|
Google Oneindia Kannada News

US Senate questions regulators on GSK drug
ನ್ಯೂಯಾರ್ಕ್, ಫೆ. 22 : ವಿಶ್ವದ ಅತಿ ಹೆಚ್ಚು ಮಧುಮೇಹಿಗಳ ತಾಣ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಭಾರತಕ್ಕೆ ಈಗ ಮತ್ತೊಂದು ಕಹಿ ಸುದ್ದಿಯೊಂದು ಬಂದಿದೆ. ಟೈಪ್ 2 ಮಧುಮೇಹ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಲಾಗುತ್ತಿರುವ ಅವಾಂಡಿಯಾ ಮಾತ್ರೆ ಹೃದಯರೊಗಕ್ಕೆ ಕಾರಣವಾಗಲಿದೆ ಎಂಬುದು ಅಧ್ಯಯನ ವರದಿಗಳಿಂದ ತಿಳಿದು ಬಂದಿದೆ.

ಈ ಮಾತ್ರೆಯಲ್ಲಿ ರೋಸಿಗ್ಲಿಟಾಜೋನ್ ಎಂಬ ಅಂಶ ಮಾರಕವಾಗಿದ್ದು, ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಹೇಳಲಾಗಿದೆ. ಗ್ಲಾಕ್ಸೋಸ್ಮಿತ್ ಕ್ಲೈನ್ ಎಂಬ ಕಂಪನಿಯ ವಿಂಡಾಮಿಟ್ ಮತ್ತು ವಿಂಡಿಯಾ ಹೆಸರಿನಲ್ಲಿ ಈ ಮಾತ್ರೆಯನ್ನು ಭಾರತದಲ್ಲಿ ಮಾರಾಟ ಮಾಡುತ್ತಿದೆ. ಇದರಲ್ಲೂ ರೋಸಿಗ್ಲಿಟಾಜೋನ್ ಇರುವುದು ಪತ್ತೆಯಾಗಿದೆ. ಅವಾಂಡಿಯಾ ಎಂಬ ಮಾತ್ರೆ ಸೇವಿಸಿದರೆ ಹೃದಯಾಘಾತ ಹಾಗೂ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ ಎಂದು ಅಮೆರಿಕ ಸೆನೆಟ್ ತಿಳಿಸಿದೆ. ಈ ಮಾತ್ರೆಯಿಂದ 500 ಕ್ಕೂ ಜನರು ಹೃದಯರೋಗದಿಂದ ಸಾವನ್ನಪ್ಪಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X