ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೀಸಲಾತಿ ವಿರುದ್ಧ ಬಿಜೆಪಿ ಚಳವಳಿ

By Shami
|
Google Oneindia Kannada News

KS Eshwarappa
ಬೆಂಗಳೂರು, ಫೆ. 22 : ಅಲ್ಪಸಂಖ್ಯಾತರಿಗೆ ಮೀಸಲಾತಿ ಮಾರ್ಗಸೂಚಿಗಳನ್ನು ಸಲಹೆ ಮಾಡಿ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅವರು ಸಲ್ಲಿಸಿರುವ ವರದಿಯನ್ನು ವಿರೋಧಿಸಲು ರಾಜ್ಯ ಬಿಜೆಪಿ ಘಟಕ ಸಜ್ಜಾಗುತ್ತಿದೆ. ಪ್ರತಿಭಟನೆಯನ್ನು ಯಾವ ರೀತಿ ರೂಪಿಸಬೇಕು ಎಂದು ಸಮಾಲೋಚನೆ ನಡೆಸಲು ಅಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ಬಿಜೆಪಿ ಕಾರ್ಯಕರ್ತರ ಸಭೆಯನ್ನು ಇದೇ ಗುರುವಾರ 25ಕ್ಕೆ ಬೆಂಗಳೂರಿನಲ್ಲಿ ಕರೆದಿದ್ದಾರೆ.

ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು. ರಂಗನಾಥ್ ಮಿಶ್ರಾ ಆಯೋಗದ ವರದಿ ದಲಿತ ಮತ್ತು ಹಿಂದುಳಿದ ವರ್ಗದವರಿಗೆ ಮರಣ ಶಾಸನ. ಧರ್ಮ ಮತ್ತು ಲಿಂಗ ಆಧರಿಸಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವುದು ಯಾವ ನ್ಯಾಯ. ಈ ವರದಿ ಪ್ರಕಾರ ಶೇ. 15ರಷ್ಟು ಮೀಸಲಾತಿ ನೀಡಬೇಕು ಎಂದು ವರದಿ ಹೇಳಿದೆ. ಅದರಲ್ಲಿ ಶೇ. 10ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡುವುದು ಯಾವ ಕಾರಣಕ್ಕೆ?

ದಲಿತ ಮತ್ತು ಹಿಂದುಳಿದ ಜನಾಂಗದಲ್ಲಿ ಲಕ್ಷಾಂತರ ಮಂದಿ ಈವರೆಗೂ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ. ಹೀಗಿರುವಾಗ ಕೇಂದ್ರದ ಯುಪಿಎ ಸರಕಾರ ಈ ವರದಿಯನ್ನು ಜಾರಿಗೊಳಿಸಲು ಮುಂದಾಗುತ್ತಿರುವುದೇಕೆ? ಇದು ಅಲ್ಪಸಂಖ್ಯಾತರ ಒಲೈಕೆ ರಾಜಕಾರಣದಲ್ಲವೇ? ದೇಶದ ಅಭಿವೃದ್ಧಿಗೆ ಮಾರಕವಾಗುವ ಇಂತಹ ವರದಿಯನ್ನು ಜಾರಿಗೊಳಿಸಬಾರದು ಎಂದು ಎಂದು ಈಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ರಂಗನಾಥ್ ಮಿಶ್ರಾ ಅವರ ವರದಿ ಜಾರಿಗೊಳಿಸುವುದನ್ನು ದಲಿತರು ಮತ್ತು ಹಿಂದುಳಿದ ವರ್ಗದವರು ಸಹಿಸುವುದಿಲ್ಲ. ಏಕೆಂದರೆ ಈ ವರದಿ ಜಾರಿಗೆ ಬಂದರೆ ಅವರೆಲ್ಲರಿಗೆ ಅನ್ಯಾಯವಾಗುತ್ತದೆ ಎಂದು ಈಶ್ವರಪ್ಪ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಮಿಶ್ರಾ ಅವರ ವರದಿ ದಲಿತರನ್ನು ಇಸ್ಲಾಂ ಮತ್ತು ಕ್ರಿಸ್ತಮತಕ್ಕೆ ಮತಾಂತರಗೊಳ್ಳುವಂತೆ ಪ್ರೇರೇಪಿಸುತ್ತದೆ ಎಂದೂ ಅವರು ವ್ಯಾಖ್ಯಾನಿಸಿದರು.

ಫೆ. 25ರಂದು ಬಿಜೆಪಿ ಸಭೆ

ರಂಗನಾಥ್ ಮಿಶ್ರಾ ವರದಿ ಕುರಿತು ಚರ್ಚಿಸಲು ಫೆ. 25 ಗುರುವಾರದಂದು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ. ಈ ಸಭೆಗೆ ಸಂಸತ್ ಸದಸ್ಯರು, ಶಾಸಕರು, ಸಚಿವರು, ರಾಜ್ಯ ಮತ್ತು ಜಿಲ್ಲಾ ಬಿಜೆಪಿ ಘಟಕಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಈಶ್ವರಪ್ಪ ತಿಳಿಸಿದರು.

ಗುರುವಾರದ ಸಭೆಯಲ್ಲಿ ಮಿಶ್ರಾ ವರದಿ ಕುರಿತ ಚರ್ಚೆಯಲ್ಲದೆ, ಏಪ್ರಿಲ್ ನಲ್ಲಿ ಬರುವ ಗ್ರಾಮ ಪಂಚಾಯಿತಿ ಚುನಾವಣೆಗಳಿಗೆ ಭಾಜಪ ತನ್ನನ್ನು ತಾನು ಹೇಗೆ ಅಣಿಗೊಳಿಸಿಕೊಳ್ಳಬೇಕು ಎಂಬ ಬಗ್ಗೆಯೂ ಚಿಂತನೆ ನಡೆಸಲಿದೆ. ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಒಬ್ಬರನ್ನು ಚುನಾವಣಾ ಉಸ್ತುವಾರಿ ನೋಡಿಕೊಳ್ಳಲು ನೇಮಕ ಮಾಡಲಾಗುತ್ತದೆ. ಜತೆಗೆ, ಪ್ರತಿಯೊಂದು ಜಿಲ್ಲೆಗೂ ಚುನಾವಣೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಲಾಗುತ್ತದೆ ಎಂದು ಬಿಜೆಪಿ ಅಧ್ಯಕ್ಷರು ವಿವರಿಸಿದರು.

ರಂಗನಾಥ್ ಮಿಶ್ರಾ ಆಯೋಗದಲ್ಲಿ ಸುಪ್ರಿಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಕೇಂದ್ರ ಮಾನವ ಹಕ್ಕು ಆಯೋಗದ ಮಾಜಿ ಅಧ್ಯಕ್ಷ ರಂಗನಾಥ್ ಮಿಶ್ರಾ ಮುಖ್ಯಸ್ಥರಾಗಿದ್ದು, ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಚೇರಮನ್ ಡಾ. ತಾಹೀರ್ ಮೊಹ್ಮದ್, ದೆಹಲಿಯ ಸ್ಟೀಫನ್ಸ್ ಕಾಲೇಜಿನ ಅನಿಲ್ ವಿಲ್ಸನ್, ಪಂಜಾಬ್ ನ್ಯಾಷನಲ್ ಇನ್ಟಿಟ್ಯೂಟ್ ನ ನಿರ್ದೇಶಕ ಮಹೀಂದರ್ ಸಿಂಗ್ ಹಾಗೂ ಆಶಾ ದಾಸ್ ಅವರುಗಳು ಸದಸ್ಯರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X