ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಶ್ಚಂದ್ರ ಘಾಟಿಗೆ ಮೂರು ತಿಂಗಳು ರಜೆ

By Shami
|
Google Oneindia Kannada News

Harishchandra Ghat
ಬೆಂಗಳೂರು, ಫೆ.22 : ಬೆಂಗಳೂರು ನಗರದ ಹರಿಶ್ಚಂದ್ರ ಘಾಟ್ ನಲ್ಲಿರುವ ವಿದ್ಯುತ್ ಚಿತಾಗಾರವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ನಗರದ ಅತ್ಯಂತ ಹಳೆಯ ಚಿತಾಗಾರವಾಗಿರುವ ಹರಿಶ್ಚಂದ್ರ ಅಂಗಳದಲ್ಲಿ ಹಲಕೆಲವು ಹೊಸ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಕಾಮಗಾರಿ ಕೆಲಸಗಳನ್ನು ಮಾಡಲು ಮುಂದಾಗಿರುವುದರಿಂದ ಇಲ್ಲಿ ಅಂತ್ಯಕ್ರಿಯೆ ಮಾಡುವುದನ್ನು ನಿಲ್ಲಿಸಲಾಗಿದೆ.

ಘಾಟ್ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿರುವ ಪ್ರಯುಕ್ತ ಫೆ.22ರಿಂದ ಸುಮಾರು 90 ದಿನಗಳ ಕಾಲ ಇಲ್ಲಿ ದಹನ ಕ್ರಿಯೆ ನೆರವೇರಿಸುವುದಕ್ಕೆ ಸಾಧ್ಯವಾಗುವುದಿಲ್ಲ, ಸಾರ್ವಜನಿಕರು ಸಹಕರಿಸಬೇಕು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಕೆಲವು ಸಂಕ್ಷಿಪ್ತ ಸುದ್ದಿಗಳು:

* ರಾಜ್ಯ ವಿಶ್ವಕರ್ಮ ಸಾಮಾಜಿಕ ರಾಜಕೀಯ ಕ್ರಿಯಾ ಸಮಿತಿಯ ರಾಷ್ಟ್ರೀಯ ಮಹಾ ಸಮ್ಮೇಳನ ಫೆ.28ರಂದು ಚಿಕ್ಕಮಗಳೂರಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಗೃಹ ಮತ್ತು ಮುಜರಾಯಿ ಸಚಿವ ವಿಎಸ್ ಆಚಾರ್ಯ ಸಮ್ಮೇಳನ ಉದ್ಘಾಟಿಸಲಿದ್ದಾರೆಂದು ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

* ದೃಷ್ಟಿ ಮತ್ತು ಶ್ರವಣ ವಿಕಲಚೇತನ ಮತ್ತು ಇತರ ಕಲಿಕಾ ವಿಕಲಚೇತನ ಸಮಸ್ಯೆಗಳನ್ನು ಹೊಂದಿರುವ ಮಕ್ಕಳಿಗೆ ಪಿಯು ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ಬರೆಯಲು ಹೆಚ್ಚುವರಿ ಸಮಯ ನೀಡಲಾಗುತ್ತದೆ. ಮೂರು ಗಂಟೆಗಳ ಪರೀಕ್ಷಾ ಸಮಯದ ಜೊತೆ ಒಂದು ಗಂಟೆ ಹೆಚ್ಚುವರಿ ಸಮಯ ನೀಡಲಾಗುತ್ತದೆ. ಸಂಬಂಧಪಟ್ಟ ಪೋಷಕರು ಮುಖ್ಯೋಪಾಧ್ಯಾಯರನ್ನು ಅಥವಾ ಪ್ರಾಂಶುಪಾಲರನ್ನು ಸಂಪರ್ಕಿಸಬೇಕಾಗಿ ಪಿಯೂಸಿ ಪರೀಕ್ಷಾ ಮಂಡಳಿ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X