ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಗೀತ ವಿವಿ ಜಮೀನು ಬದಲಿಸಿದರೆ ಹೋರಾಟ

By Mrutyunjaya Kalmat
|
Google Oneindia Kannada News

D Javaregowda
ಮೈಸೂರು, ಫೆ. 22 : ಡಾ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಗೆ ಮೈಸೂರು ತಾಲ್ಲೂಕಿನ ವರಕೋಡು ಬಳಿಯ 100 ಎಕರೆ ಜಮೀನನ್ನು ಸರಕಾರ ನೀಡಿದ್ದು, ಯಾವುದೇ ಕಾರಣಕ್ಕೂ ಬದಲಿಸಬಾರದು. ಒಂದು ವೇಳೆ ಬದಲಿಸಿದಲ್ಲಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಹಿರಿಯ ಸಾಹಿತಿ ದೇ ಜವರೇಗೌಡ ಎಚ್ಚರಿಸಿದ್ದಾರೆ.

ಸಂಗೀತ ವಿವಿ ಕುಲಪತಿ ಡಾ ಹನುಮಣ್ಣ ನಾಯಕ ದೊರೆ ಅವರು ಸಾಹಿತಿ ಮಳಲಿ ವಸಂತ್ ಕುಮಾರ್, ಸಾಹಿತ್ಯ ಅಕಾಡಮಿ ಟ್ರಸ್ಟ್ ಅಧ್ಯಕ್ಷ ರಾಮಪ್ರಸಾದ್ ಅವರೊಂದಿಗೆ ತಾವು ಸ್ಥಳಕ್ಕೆ ಭೇಟಿ ನೀಡಿದ್ದು, ಅಲ್ಲಿ ಯಾವುದೇ ರೀತಿಯ ವಿವಾದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಗಿಡಿ ಮರಗಳನ್ನು ಉಳಿಸಿಕೊಂಡೇ ವಿವಿಯ ಕಟ್ಟಡ ನಿರ್ಮಾಣ ಆಗಬೇಕೆಂಬ ಉದ್ದೇಶವನ್ನು ಕುಲಪತಿ ಹನುಮಣ್ಣ ದೊರೆ ವ್ಯಕ್ತಪಡಿಸಿದ್ದು, ಅದಕ್ಕೆ ತಕ್ಕಂತೆ ಮಾವು, ಹೊಂಗೆ, ಗೇರು ಬೀಜದ ವ್ಯಕ್ತಗಳನ್ನು ನೆಟ್ಟು ಪ್ರಾಕೃತಿಕ ಪರಿಸರ ಮತ್ತಷ್ಟು ಸುಂದರಗೊಳಿಸಲು ಸಂಗೀತ ಸಾಧಕರ ಸಾಧನೆ ಪ್ರಕೃತಿಯ ಮಡಿಲಲ್ಲಿ ನಡೆಯಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿವಾದದ ಹಿನ್ನೆಯೆಯಲ್ಲಿ ಜಿಲ್ಲಾಧಿಕಾರಿ ಮಣಿವಣ್ಣನ್ ಅವರೊಂದಿಗೊ ಮಾತುಕತೆ ನಡೆಸಿದಾಗ ಅವರು ಇದು ಕಂದಾಯ ಭೂಮಿಯಾಗಿದ್ದು, ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X