ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಇಟಿ: ಶೇ.50:50 ಅನುಪಾತದಲ್ಲಿ ಸೀಟು ಹಂಚಿಕೆ

By Rajendra
|
Google Oneindia Kannada News

Aravinda Limbavali,
ಬೆಂಗಳೂರು, ಫೆ.20: ಕಾಮೆಡ್ ಕೆ ಒತ್ತಡ ತಂತ್ರ ಫಲಿಸಿದ್ದು ಸರಕಾರ ಸಿಇಟಿ ಎಂಜಿನಿಯರಿಂಗ್ ಶುಲ್ಕವನ್ನು ರು.25,000ದಿಂದ ರು.30,000ಕ್ಕೆ ಹೆಚ್ಚಿಸಿದೆ. ಕಳೆದ ವರ್ಷದ ಹಾಗೆ ಎಂಜಿನಿಯರಿಂಗ್ ನಲ್ಲಿ ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳಿಗೆ ತಲಾ ಶೇ.50:50 ಅನುಪಾತದ ಸೀಟು ಹಂಚಿಕೆ ಮುಂದುವರಿಯಲಿದೆ.

ಈ ಬಾರಿಯೂ ಸರಕಾರ ಹಾಗೂ ಕಾಮೆಡ್ ಕೆ ಪ್ರತ್ಯೇಕವಾಗಿ ಸಿಇಟಿ ನಡೆಸಲಿವೆ. ಉನ್ನತ ಶಿಕ್ಷನ ಸಚಿವ ಅರವಿಂದ ಲಿಂಬಾವಳಿ ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಪ್ರಮುಖರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

ಹೊಸ ಒಪ್ಪಂದದ ಪ್ರಕಾರ ಸರಕಾರ ಶೇ.50 ಸೀಟುಗಳನ್ನು ತುಂಬಲಿದೆ. ಮಿಕ್ಕ ಸೀಟುಗಳಿಗೆ ಕಾಮೆಡ್ ಕೆ ಪರೀಕ್ಷೆ ನಡೆಸುತ್ತದೆ. ಅಲ್ಪ ಸಂಖ್ಯಾತರ ವಿಭಾಗದಲ್ಲಿ ಶೇ.45 ಸೀಟಿಗೆ ಸಿಇಟಿ ಅನ್ವಯವಾಗಲಿದೆ. ಉಳಿದ ಶೇ.55ರಷ್ಟು ಸೀಟುಗಳು ಮ್ಯಾನೇಜ್ ಮೆಂಟ್ ಗೆ ಲಭ್ಯವಾಗಲಿವೆ.

ಬಡ ಪ್ರತಿಭಾವಂತರ ಶುಲ್ಕವನ್ನು ಹೆಚ್ಚಿಸುವಂತೆ ಆಡಳಿತ ಮಂಡಳಿ ಪಟ್ಟು ಹಿಡಿದಿತ್ತು. ವಿದ್ಯಾರ್ಥಿಗಳ ಹಿತ ಕಾಯುವಲ್ಲಿ ಸರಕಾರ ಯಶಸ್ವಿಯಾಗಿದ್ದು ಶುಲ್ಕವನ್ನು ರು.15 ಸಾವಿರಕ್ಕೆ ನಿಗದಿಗೊಳಿಸಿದೆ. ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರೂ ಸಿಇಟಿ ಬರೆಯಬಹುದು. 65 ದಿನಗಳಲ್ಲಿ 3ಸುತ್ತಿನಲ್ಲಿ ಸಿಇಟಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.

ಕುಟುಂಬದ ವಾರ್ಷಿಕ ಆದಾಯ ರು.2 ಲಕ್ಷಕ್ಕಿಂತಲೂ ಕಡಿಮೆ ಇರುವ ಪ್ರತಿಭಾವಂತ ವಿದ್ಯಾರ್ಥಿಗಳ ಸಿಇಟಿ ರ‌್ಯಾಂಕ್ 20 ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಈ ವಿದ್ಯಾರ್ಥಿಗಳು ರು.15 ಸಾವಿರ ಶುಲ್ಕವನ್ನು ಭರಿಸಬೇಕಾಗುತ್ತದೆ. ಉಳಿದ ರು.10 ಸಾವಿರವನ್ನು ಮ್ಯಾನೇಜ್ ಮೆಂಟ್ ಗೆ ಸರಕಾರ ಭರಿಸಲಿದೆ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X