ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾ.1 ರಿಂದ ಕೆಎಂಎಫ್ ಹಾಲು 2 ರುಪಾಯಿ ತುಟ್ಟಿ

By Mrutyunjaya Kalmat
|
Google Oneindia Kannada News

Somashekhar Reddy
ಬೆಂಗಳೂರು, ಫೆ. 18 : ಪ್ರತಿ ಲೀಟರ್ ಹಾಲು ಉತ್ಪಾದನಾ ವೆಚ್ಚ 15.97 ರುಪಾಯಿ ಆಗುತ್ತಿದ್ದು, ಮಾರ್ಚ್ ನಿಂದ ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 2 ರುಪಾಯಿ ಹೆಚ್ಚಳ ಮಾಡುವುದು ಅನಿವಾರ್ಯ ಎಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರರೆಡ್ಡಿ ಹೇಳಿದ್ದಾರೆ.

ಕೆಎಂಎಫ್ ನ ವ್ಯವಸ್ಥಾಪಕ ನಿರ್ದೇಶಕರು, ಮಾರುಕಟ್ಟೆ ವ್ಯವಸ್ಥಾಪಕರು ಚರ್ಚಿಸಿ ಹಾಲಿನ ದರವನ್ನು ತಲಾ ಪ್ರತಿ ಲೀಟರ್ ಗೆ 3-4 ರುಪಾಯಿ ಹೆಚ್ಚಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಈ ಪ್ರಸ್ತಾಪವನ್ನೂ ಮುಖ್ಯಮಂತ್ರಿಯವರಿಗೂ ಸಲ್ಲಿಸಲಾಗಿದೆ. ಅದು ಅವರಿಗೆ ತಲುಪಿದೆಯೋ ಇಲ್ಲವೋ ಗೊತ್ತಿಲ್ಲ. ಫೆ. 20 ರಂದು ಕೆಎಂಎಫ್ ಆಡಳಿತ ಮಂಡಳಿ ಜೊತೆ ಚರ್ಚಿಸಲು ಸಿಎಂ ಸಮಯ ನಿಗದಿಪಡಿಸಿದ್ದಾರೆ. ಚರ್ಚೆ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೆಡ್ಡಿ ವಿವರಿಸಿದರು.

ಒಂದು ಲೀಟರ್ ಹಾಲಿನ ಉತ್ಪಾದನಾ ವೆಚ್ಚ 15.97 ರುಪಾಯಿ ಆಗಿದೆ. ಸಹಕಾರ ಸಂಘಗಳ ವತಿಯಿಂದ 13,60 ರುಪಾಯಿ ನೀಡಿ ಖರೀದಿಸಲಾಗುತ್ತಿದ್ದು, ಸರಕಾರದ ವತಿಯಿಂದ 2 ರುಪಾಯಿ ಸಹಾಯಧನ ನೀಡಲಾಗುತ್ತಿದೆ. ಹಾಗಿದ್ದೂ ಹೈನುಗಾರರಿಗೆ 40 ಪೈಸೆಯಷ್ಟು ನಷ್ಟ ಸಂಭವಿಸುತ್ತಿದೆ. ಇದನ್ನು ಸರಿದೂಗಿಸಲು ಹಾಲಿನ ದರವನ್ನು ಕನಿಷ್ಠ 2 ರುಪಾಯಿಗಳಷ್ಟು ಏರಿಸುವುದು ಅನಿವಾರ್ಯ ಎಂದು ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X