ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಕಪ್ ಹಾಕಿಗೆ ಭಾರಿ ಬಿಗಿ ಭದ್ರತೆ, ಚಿದು

By Mrutyunjaya Kalmat
|
Google Oneindia Kannada News

P Chidambaram
ನವದೆಹಲಿ, ಫೆ. 17 : ಫೆಬ್ರವರಿ 28ರಿಂದ ಆರಂಭವಾಗಲಿರುವ ವಿಶ್ವಕಪ್ ಹಾಕಿ ಪಂದ್ಯಾವಳಿ ಹಾಗೂ ಆಟಗಾರರಿಗೆ ಸಾಕಷ್ಟು ಭದ್ರತೆ ಒದಗಿಸಲಾಗುವುದು ಎಂದು ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಭರವಸೆ ನೀಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ಮೂಲದ ಹೂಜಿ ಸಂಘಟನೆ ಮುಖಂಡ ನೀಡಿರುವ ಬೆದರಿಕೆಯನ್ನು ಸ್ಪಷ್ಟವಾಗಿ ಅಲ್ಲಗೆಲೆದ ಅವರು, ಯಾರೂ ಒಬ್ಬ ಅಜ್ಞಾತ ಸ್ಥಳದಲ್ಲಿ ಕುಳಿತು ನೀಡಿರುವ ಹೇಳಿಕೆಗೆ ಮಹತ್ವ ನೀಡಬೇಕಾಗಿಲ್ಲ. ಪಂದ್ಯಾವಳಿ ಮತ್ತು ಆಟಗಾರರ ಸುರಕ್ಷೆಯ ಜವಾಬ್ದಾರಿಯನ್ನು ಸರಕಾರ ವಹಿಸಿಕೊಳ್ಳಲಿದೆ ಎಂದರು. ಭಾರತದ ಮೇಲೆ ದಾಳಿ ನಡೆಯಲಿದ್ದು, ಅಲ್ಲಿ ನಡೆಯಲಿರುವ ಕ್ರೀಡಾಕೂಟಗಳಿಗೆ ಅಂತಾರಾಷ್ಟ್ರೀಯ ಆಟಗಾರರು ಭಾಗವಹಿಸಬಾರದು ಎಂದು ಹೂಜಿ ಮುಖಂಡ ಇಲ್ಯಾಸ್ ಕಾಶ್ಮೀರಿ ಎಚ್ಚರಿಕೆ ನೀಡಿದ್ದರು.

ಸರಕಾರದ ಈ ವಿಷಯದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದು, ಹಾಕಿ ವಿಶ್ವಕಪ್ ಸರಳವಾಗಿ ನಡೆಯಲು ಸಾಕಷ್ಟು ಪೂರ್ವತಯಾರಿಯನ್ನೂ ಮಾಡಿಕೊಳ್ಳಲಾಗಿದೆ. ಫೆ. 28 ರಿಂದ ಮಾರ್ಚ್ 13ರ ವರಗೆ ಪಂದ್ಯಾವಳಿಗಳು ನಡೆಯಲಿವೆ. 10 ದೇಶದ ಸುಮಾರು 400 ಆಟಗಾರರ, ವಿವಿಐಪಿಗಳು ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರಿಗೂ ರಕ್ಷಣೆ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಮುಖ್ಯವಾಗಿ 10 ಪ್ಯಾರಾ ಮಿಲಿಟರಿ ಪಡೆಗಳು ಕಾರ್ಯನಿರ್ವಹಿಸುತ್ತವೆ. ವಿಶೇಷ ತರಬೇತಿ ಪಡೆ 200ಕಮಾಂಡೋಗಳು ಕ್ರೀಡಾಂಗಣದ ಪಹರೆಗೆ ಇರುತ್ತಾರೆ ಎಂದು ಚಿದು ವಿವರಿಸಿದರು. ನವದೆಹಲಿಯ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಹಾಕಿ ವಿಶ್ವಕಪ್ ನಡೆಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X