ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಡನ್ ಗಾರ್ಡನ್ ಕಿಂಗ್ ವಿವಿಎಸ್ ಲಕ್ಷ್ಮಣ್

By Mrutyunjaya Kalmat
|
Google Oneindia Kannada News

Lakshman and Dhoni
ಕೊಲ್ಕತ್ತಾ, ಫೆ. 16 : ತಮ್ಮ ಫೆವರಿಟ್ ಅಂಕಣದಲ್ಲಿ ವಿವಿಎಸ್ ಲಕ್ಷ್ಮಣ್ ಮತ್ತೆ ಮೆರೆದಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ನಿರ್ಣಾಯಕ ಟೆಸ್ಟ್ ನಲ್ಲಿ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಆಕರ್ಷಕ ಶತಕ ಬಾರಿಸಿದ್ದಲ್ಲದೆ ಈ ಮೈದಾನದಲ್ಲಿ ಸಾವಿರ ರನ್ ಗಳ ಗಡಿಯನ್ನು ದಾಟಿದ್ದಾರೆ.

ಟೆಸ್ಟ್ ಅಗ್ರಕ್ರಮಾಂಕಕ್ಕಾಗಿ ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನ ಹಣಾಹಣಿಯಲ್ಲಿ ಭಾರತ ತನ್ನ ಪ್ರಥಮ ಇನ್ನಿಂಗ್ಸ್ ನಲ್ಲಿ ಬೃಹತ್ ಮೊತ್ತ ಕೂಡಿ ಹಾಕಿದೆ. ಸೋಮವಾರ ಸಚಿನ್, ವೀರೇಂದ್ರ ಸೆಹ್ವಾಗ್ ಅವರ ಆಕರ್ಷಕ ಶತಕಗಳನ್ನು ಗಳಿಸಿದ್ದರು. ಇಂದು ಲಕ್ಷ್ಮಣ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಹರಿಣಗಳ ಬೌಲರ್ ಗಳನ್ನು ಹಣ್ಣುಗಾಯಿ ನೀರುಗಾಯಿ ಮಾಡುವ ಮೂಲಕ ಸೆಂಚುರಿ ಬಾರಿಸಿದರು. ಭಾರತ 643/6 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. ಒಟ್ಟು 347 ರನ್ ಗಳ ಮುನ್ನಡೆಯನ್ನು ಪಡೆದಿದೆ.

ತಾಳ್ಮೆಯ ಆಟದ ಆಡಿದ ಲಕ್ಷ್ಮಣ ಟೆಸ್ಟ್ ಜೀವನ 15ನೇ ಸೆಂಚುರಿಯನ್ನು ಬಾರಿಸಿದರು. ಇದೇ ಮೈದಾನದಲ್ಲಿ 2001ರಲ್ಲಿ ಲಕ್ಷ್ಮಣ್ ಆಸ್ಟ್ರೇಲಿಯಾ ವಿರುದ್ದ ಎರಡನೇ ಇನ್ನಿಂಗ್ಸಿನಲ್ಲಿ 281 ರನ್ ಗಳಿಸುವ ಮೂಲಕ ಭಾರತವನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಸೆಂಚುರಿ ಮೂಲಕ ಈಡನ್ ಗಾರ್ಡನ್ ಮೈದಾನದಲ್ಲಿ ಲಕ್ಷ್ಮಣ 1000 ರನ್ ಗಳಿಸಿದ ಹೆಗ್ಗಳಿಕೆಗೂ ಪಾತ್ರರಾದರು.

ಎರಡನೇ ದಿನದಾಟದ ಅಂತ್ಯಕ್ಕೆ 21 ರನ್ ಗಳಿಸಿ ಔಟಾಗದೆ ಉಳಿದಿದ್ದ ಲಕ್ಷ್ಮಣ್ ಇಂದು ಅಮಿತ್ ಮಿಶ್ರಾ ಅವರೊಂದಿಗೆ ಆಟ ಮುಂದುವರಿಸಿದರು. ಆದರೆ, ಅಮಿತ್ ಮಿಶ್ರಾ ಹೆಚ್ಚು ಹೊತ್ತು ಕ್ರೀಸ್ ಬಳಿ ನಿಲ್ಲಲು ಸಾಧ್ಯವಾಗಲಿಲ್ಲ. ಹರಿಣಗಳ ಕರಾರುವಾಕ್ಕಾದ ದಾಳಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಆಗ ಲಕ್ಷ್ಮಣ್ ಜೊತೆಗೂಡಿದ ನಾಯಕ ಧೋನಿ ಜವಾಬ್ದಾರಿ ತಕ್ಕಂತೆ ಆಟವಾಡಿದರು. ಲಕ್ಷ್ಮಣ್ ಅವರಿಗೆ ಸೂಕ್ತ ಬೆಂಬಲ ನೀಡುವುದರ ಜೊತೆಗೆ ಅವಕಾಶ ಸಿಕ್ಕಾಗ ಹರಿಣಗಳ ಬೌಲ್ ಗಳನ್ನು ಬೌಂಡರಿಗೆ ಅಟ್ಟುತ್ತಿದ್ದ ಧೋನಿ ಕ್ರಿಕೆಟ್ ಅಭಿಮಾನಿಗಳಿಗೆ ಮುದನೀಡುವಂತಿತ್ತು.

ಟೆಸ್ಟ್ ನಲ್ಲಿ ನಾಯಕ ಧೋನಿಯ ನಾಲ್ಕನೇ ಶತಕ ಇದಾಗಿದ್ದು, ಟೆಸ್ಟ್ ನಲ್ಲಿ ಒಟ್ಟು ಅವರು 2428 ರನ್ ಗಳಿಸಿದ್ದಾರೆ. ಲಕ್ಷ್ಮಣ ಅವರು 15 ಶತಕದ ಮೂಲಕ 7135 ರನ್ ಗಳಿಸಿದ್ದಾರೆ. ಅಂತಿಮವಾಗಿ ಧೋನಿ 132 ರನ್ ಹಾಗೂ ವಿವಿಎಸ್ ಲಕ್ಷ್ಮಣ್ 143 ರನ್ ಗಳಿಸಿ ಅಜೇಯರಾಗಿ ಪೆವಿಲಿಯನ್ ಗೆ ಹಿಂದಿರುಗಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X