• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವನಿತೆಯರ ಕ್ರಿಕೆಟ್ ತಂಡಕ್ಕೆ ಜೂಲನ್ ನಾಯಕಿ

By Mrutyunjaya Kalmat
|

ನವದೆಹಲಿ, ಫೆ. 16 : ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಫೆಬ್ರವರಿ 19 ರಂದು ಆರಂಭವಾಗುವ ಏಕದಿನ ಕ್ರಿಕೆಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ 14 ಸದಸ್ಯರ ಭಾರತ ಮಹಿಳಾ ತಂಡ ಪ್ರಕಟಗೊಂಡಿದ್ದು ಅನುಭವಿ ಆಟಗಾರ್ತಿ ಜೂಲನ್ ಗೋಸ್ವಾಮಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಬಿಸಿಸಿಐನ ಆಯ್ಕೆ ಸಮಿತಿ ಸೋಮವಾರ ಐದು ಪಂದ್ಯಗಳ ಸರಣಿಯ ಮೊದಲೆರಡು ಏಕದಿನ ಪಂದ್ಯಗಳಿಗೆ ತಂಡ ಅಂತಿಮಗೊಳಿಸಲಾಯಿತು. ಮೊದಲೆರಡು ಪಂದ್ಯಗಳು ಬೆಂಗಳೂರಿನಲ್ಲಿ ಕ್ರಮವಾಗಿ ಫೆ. 19 ಮತ್ತು ಫೆ 21 ರಂದು ನಡೆಯಲಿವೆ. ಸರಣಿಯ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡ ಫೆ 17 ರಂದು ಮಂಡಳಿ ಅಧ್ಯಕ್ಷರ ಇಲೆವನ್ ವಿರುದ್ಧ ಅಭ್ಯಾಸ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ.

ಏಕದಿನ ವೇಳಾಪಟ್ಟಿ:-ಫೆ 19-ಬೆಂಗಳೂರು, ಫೆ. 21:ಬೆಂಗಳೂರು, ಫೆ. 24:ವಿಶಾಖಪಟ್ಟಣ, ಫೆ 26:ವಿಶಾಖಪಟ್ಟಣ, ಮಾರ್ಚ್ 1 :ಮುಂಬೈ. ಟಿ20 ವೇಳಾಪಟ್ಟಿ:-ಮಾರ್ಚ್ 4:ಡಿವೈ ಪಾಟೀಲ್ ಕ್ರೀಡಾಂಗಣ ಮುಂಬೈ, ಮಾರ್ಚ್ 6:ಬಿಕೆಸಿ ಕ್ರೀಡಾಂಗಣ ಮುಂಬೈ, ಮಾರ್ಚ್ 8:ಬಿಕೆಸಿ ಕ್ರೀಡಾಂಗಣ ಮುಂಬೈ.

ತಂಡದ ಸದಸ್ಯರ ಪಟ್ಟಿ:- ಜೂಲನ್ ಗೋಸ್ವಾಮಿ(ನಾಯಕಿ), ಮಿಥಾಲಿ ರಾಜ್, ಅಂಜುಮ್ ಚೋಪ್ರಾ, ರುಮೇಲಿಧರ್, ಅಮಿತ್ ಶರ್ಮಾ, ಪ್ರಿಯಾಂಕಾ ರಾಯ್, ಅನಘಾ ದೇಶಪಾಂಡೆ(ವಿಕೆಟ್ ಕೀಪರ್), ಪೂನಮ್ ರೌತ್, ಹರ್ಮನ್ ಪ್ರೀತ್ ಕೌರ್, ತಿರುಶಕಾಮಿನಿ, ಗೌಹರ್ ಸುಲ್ತಾನಾ, ನೂಶಿನ್ ಖಾದೀರ್, ಪ್ರೀತಿ ದಿಮ್ರಿ, ಸೋನಿಯಾ ದಾಬಿರ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X