ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೀಟ ವಿಸ್ಮಯ ಒಂದು ವಿನೂತನ ಪ್ರದರ್ಶನ

By Mahesh
|
Google Oneindia Kannada News

Insects Exhibition by Vismya Pratishtana
ಚಿಕ್ಕಮಗಳೂರು, ಫೆ. 16:ಪರಿಸರವಾದಿ, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಆಸಕ್ತಿದಾಯಕ ವಿಷಯಗಳಲ್ಲಿ ಕೀಟಗಳ ಜೀವನಕ್ರಮ ಅಧ್ಯಯನವು ಒಂದು. ಕೀಟಗಳ ವಿಸ್ಮಯ ಲೋಕದ ಪರಿಚಯವನ್ನು ಎಲ್ಲರಿಗೂ ತಲುಪಿಸುವುದು, ಅದರಲ್ಲೂ ವೈವಿಧ್ಯಮಯ ಕೀಟಗಳ ಬಗ್ಗೆ ಎಳೆಯರಿಗೆ ವಿವರಿಸಿ, ಅವರೊಟ್ಟಿಗೆ ತಾವು ಬೆರೆತು, ಅನಂದ ಅನುಭೂತಿ ಹೊಂದುತ್ತಿದ್ದರು.

ತೇಜಸ್ವಿ ಅವರ ಜೀವಿತಾವಧಿಯಲ್ಲೂ ಕೀಟಗಳ ಪರಿಚಯ ಹಾಗೂ ಮಾಹಿತಿ ಪಸರಿಸಲು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು. ಅವರ ಅಶಯದ ಅನುಸಾರವಾಗಿ ಸಾಗಲು ಪಣತೊಟ್ಟಿರುವ ಮೂಡಿಗೆರೆಯ ನೇಚರ್ ಕ್ಲಬ್ ಹಾಗೂ ವಿಸ್ಮಯ ಪ್ರತಿಷ್ಠಾನದವರು ಈಗ ಮತ್ತೊಮ್ಮೆ ಜಿಲ್ಲಾ ಕೇಂದ್ರದಲ್ಲಿ ಕೀಟಗಳ ವಿಸ್ಮಯ ಲೋಕ ಅನಾವರಣಕ್ಕೆ ಮುಂದಾಗಿದ್ದಾರೆ.

ಫೆ. 19 ರಿಂದ ಫೆ. 21 ರವರೆಗೆ ಚಿಕ್ಕಮಗಳೂರಿನ ಎಂಎಲ್ ವಿ ರೋಟರಿ ಹಾಲ್ ನಲ್ಲಿ 'ಕೀಟ ವಿಸ್ಮಯ' ಪ್ರದರ್ಶನವಿರುತ್ತದೆ. ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 7 ರವರೆಗೆ ಪ್ರದರ್ಶನವು ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ತಮ್ಮ ಆಸಕ್ತಿಯನ್ನು ತಣಿಸಿಕೊಳ್ಳಬಹುದು ಎಂದು ವಿಸ್ಮಯ ಪ್ರತಿಷ್ಠಾನದ ಸಹಕಾರ್ಯದರ್ಶಿ ಮಗ್ಗಲಮಕ್ಕಿ ಗಣೇಶ್ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X