ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಂಡಾವತಿ ಯೋಜನೆ ನಿಲ್ಲದು, ಹಾಲಪ್ಪ

By Mrutyunjaya Kalmat
|
Google Oneindia Kannada News

Haratalu Halappa
ಬೆಂಗಳೂರು, ಫೆ. 15 : ದಂಡಾವತಿ ನೀರಾವರಿ ಯೋಜನೆಯ ವಾಸ್ತವಾಂಶಗಳನ್ನು ಮರೆಮಾಚಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಹರತಾಳು ಹಾಲಪ್ಪ ಹೇಳಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಯೋಜನೆಗೆ ಪ್ರಯತ್ನಿಸಿದರೇ ಇದೀಗ ರಾಜಕೀಯ ಲಾಭಕ್ಕೆ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ದಂಡಾವತಿ ಯೋಜನೆ ಆಗಲೇಬೇಕಾಗಿದ್ದು, ಅನುಷ್ಠಾನಗೊಳಿಸಲು ಸರಕಾರ ಬದ್ಧವಾಗಿದೆ. ಯೋಜನೆಗೆ ಟೆಂಡರ್ ಅಂತಿಮಗೊಂಡಿದ್ದು, ಗುದ್ದಲಿ ಪೂಜೆಯೂ ನಡೆದಿದೆ ಎಂದರು.

272 ಕೋಟಿ ರುಪಾಯಿ ಮೊತ್ತದ ಈ ನೀರಾವರಿಯಿಂದ ಸೊರಬ ಮತ್ತು ಶಿಕಾರಿಪುರ ತಾಲ್ಲೂಕಿನ 17,132 ಎಕರೆಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಯೋಜನೆಯಿಂದ ನಾಲ್ಕು ಗ್ರಾಮಗಳು ಮುಳುಗಡೆಯಾಗಲಿದ್ದು, ಪುನರ್ವಸತಿ ಕಲ್ಪಿಸಬೇಕಾಗಿದೆ. ಅರಣ್ಯ ಇಲಾಖೆಯ 113 ಎಕರೆ ಭೂಮಿ ಸೇರಿದಂತೆ 1347 ಎಕರೆ ಮಾತ್ರ ಮುಳುಗಡೆ ಆಗಲಿದೆ ಎಂದು ಹಾಲಪ್ಪ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X