ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ ಅಟ್ಟಹಾಸ : ದೇಶಾದ್ಯಂತ ಹೈಅಲರ್ಟ್

By Mrutyunjaya Kalmat
|
Google Oneindia Kannada News

Home Ministry puts Delhi, Indore, Kanpur on red alert
ನವದೆಹಲಿ, ಫೆ. 14 : ಪುಣೆಯಲ್ಲಿ ಶನಿವಾರ ಉಗ್ರರು ನಡೆಸಿದ ಅಟ್ಟಹಾಸದ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿ, ಇಂದೋರ್ ಮತ್ತು ಕಾನ್ಪುರ್ ನಗರಗಳು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಕಟ್ಟೆಚ್ಚರ ನಿಯೋಜಿಸಲಾಗಿದೆ. ರಾಜ್ಯ ಕರಾವಳಿ ಪ್ರದೇಶದಲ್ಲಿಯೂ ಭಾರಿ ಬಿಗಿ ಭದ್ರತೆ ನಿಯೋಜಿಸಲಾಗಿದೆ ಎಂದು ರಾಜ್ಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯಲ್ಲಿರುವ ಜರ್ಮನ್ ಬೇಕರಿ ಬಳಿ ನಡೆದ ಸ್ಫೋಟ ವೀಕ್ಷಣೆ ನಂತರ ಗೃಹ ಸಚಿವ ಪಿ ಚಿದಂಬರಂ ರಾಜಧಾನಿಗೆ ತೆರಳಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಘಟನೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಈ ಮಧ್ಯೆ ಉಗ್ರರು ದಾಳಿ ನಡೆಸಬಹುದಾದ ದೆಹಲಿ, ಇಂದೋರ್ ಮತ್ತು ಕಾನ್ಪುರ್ ನಗರಗಳಲ್ಲಿ ಭಾರಿ ಬಿಗಿ ಭದ್ರತೆಯನ್ನು ನಿಯೋಜಿಸಲು ಕೇಂದ್ರ ಸರಕಾರ ಸೂಚನೆ ನೀಡಿದೆ. ಅಲ್ಲದೇ ಗುಜರಾತ್ ರಾಜ್ಯದಲ್ಲಿ ಉಗ್ರರು ದಾಳಿ ನಡೆಸಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿ ಸರಕಾರ ಬಿಗಿ ಕ್ರಮ ಕೈಗೊಳ್ಳಲು ಆದೇಶಿಸಿದ್ದಾರೆ.

ಪುಣೆಯಲ್ಲಿ ನಡೆದ ಭಯೋತ್ಪಾದನೆ ಘಟನೆಯಲ್ಲಿ ಇಂಡಿಯನ್ ಮುಜಾಹಿದೀನ್ ಸಂಘಟನೆ ಕೈವಾಡವಿರುವ ಶಂಕೆ ವ್ಯಕ್ತಪಡಿಸಲಾಗಿದೆ. 2008ರ ನವೆಂಬರ್ 26 ರಂದು ನಡೆದ ಭಯೋತ್ಪಾದನೆ ನಂತರ ಮೊದಲ ಬಾರಿಗೆ ನಡೆದ ಕೃತ್ಯವಾಗಿದೆ. ಪುಣೆ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದು,57 ಮಂದಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X