ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಗೆ ಸೆಡ್ಡು ಹೊಡೆಯುವ ಗೂಗಲ್ ಬಝ್

By Mrutyunjaya Kalmat
|
Google Oneindia Kannada News

Google starts new networking website Google Buzz
ಮೌಂಟೇನ್ ವ್ಯೂ, ಫೆ. 11 : ಫೇಸ್ ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ವೆಬ್ ತಾಣಗಳಿಗೆ ಸೆಡ್ಡು ಹೊಡೆಯಲು ಗೂಗಲ್ ತನ್ನದೇ ಆದ ಹೊಸ ಸಾಮಾಜಿಕ ವೆಬ್ ಗೂಗಲ್ ಬಝ್ ನ್ನು ಬಿಡುಗಡೆ ಮಾಡಿದೆ.

ಅಮೆರಿಕದ ಮೌಂಟೇನ್ ವ್ಯೂನಲ್ಲಿರುವ ಗೂಗಲ್ ಕಚೇರಿಯಲ್ಲಿ ಬಝ್ ಗೆ ಚಾಲನೆ ನೀಡಲಾಗಿದೆ. ಬಳಕೆದಾರರಿಗೆ ಕೆಲವು ದಿನಗಳಲ್ಲಿ ಜಿ-ಮೇಲ್ ಇನ್ ಬಾಕ್ಸ್ ನಲ್ಲಿ ಬಝ್ ಕೂಡಾ ಸಿಗಲಿದೆ. ಬಝ್ ತಾಣದಲ್ಲಿ ಸ್ನೇಹಿತರ ಪಟ್ಟಿ ತನ್ನಿಂತಾನೆ ಪರಿಷ್ಕೃತವಾಗಲಿದೆ. ಬಝ್ ಶಿಪಾರಸ್ಸು ಕೂಡಾ ಇರುತ್ತದೆ. ನೀವು ಬಝ್ ನಲ್ಲಿ ಇದ್ದುಕೊಂಡೇ, ಈಗಾಗಲೇ ಬಳಸುತ್ತಿರುವ ಫೇಸ್ ಬುಕ್ , ಟ್ವಿಟರ್, ಪಿಕಾಸಾ, ಗೂಗಲ್ ರೀಡರ್ ನ ಸಂಪರ್ಕ ಪಡೆದುಕೊಳ್ಳಲು ಅವಕಾಶ ಇದೆ.

ಬರೀ ಟೆಕ್ಟ್ಸ್ ಸಂದೇಶಗಳನ್ನು ಮಾತ್ರವಲ್ಲದೆ ಗೂಗಲ್ ಬಝ್ ನಲ್ಲಿ ಫೋಟೋ, ವಿಡಿಯೋ ಮುಂತಾದವುಗಳನ್ನು ಕಳಿಸಬಹುದು. ಮೊಬೈಲ್ ಗಳಲ್ಲಿ ಕೂಡ ಗೂಗಲ್ ಬಝ್ ಸಂದೇಶಗಳನ್ನು ಪಡೆಯಲು ಅವಕಾಶವಿದೆ. ಬಝ್ ಖಾತೆ ಲಭಿಸಲು ಜಿ-ಮೇಲ್ ಖಾತೆ ಇದ್ದರೆ ಸಾಕು, ಇನ್ನೇನು ಬೇಕಿಲ್ಲ. ಇದರ ಮೂಲಕ ಸ್ನೇಹಿತರ ಜೊತೆ ಸಂಭಾಷಣೆ ನಡೆಸಬಹುದು. ಪ್ರತಿಯೊಂದು ಪ್ರಕಟಣೆಯನ್ನು ನಿಮ್ಮ ಸ್ನೇಹಿತರ ಜೊತೆ ಇಲ್ಲವೇ ಎಲ್ಲರ ಜೊತೆಗೂ ಹಂಚಿಕೊಳ್ಳಬಹುದು. ಇಷ್ಟು ಮಾತ್ರವಲ್ಲ ಗೂಗಲ್ ಮ್ಯಾಪ್ ಸಹಾಯದಿಂದ ನಿಮ್ಮ ಹತ್ತಿರವಿರುವ ಸ್ನೇಹಿತರನ್ನು ನೀವು ಪತ್ತೆ ಹಚ್ಚಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X