ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ನಿಷೇಧಕ್ಕೆ ಸಂಪುಟ ಅಸ್ತು

By Mrutyunjaya Kalmat
|
Google Oneindia Kannada News

Cabinet nod for cow slaughter ban act
ಬೆಂಗಳೂರು, ಫೆ. 11 : ಮುಂಬರುವ ಅಧಿವೇಶನದಲ್ಲಿ ಮಂಡನೆಯಾಗಲಿರುವ 'ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ' ಮಸೂದೆ ತಿದ್ದುಪಡಿ ವಿಧೆಯಕ್ಕೆ ರಾಜ್ಯ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಗೋ ಸಂರಕ್ಷಣೆಗೆ ಸಂಬಂಧಿಸಿದಂತೆ 1964ರ ಕಾಯಿದೆಗೆ ಸಮಗ್ರ ತಿದ್ದುಪಡಿ ತರಲು ಸರಕಾರ ಉದ್ದೇಶಿಸಿದೆ.

ಗೃಹ ಸಚಿವ ವಿ ಎಸ್ ಆಚಾರ್ಯ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಗೋಹತ್ಯೆ ಮತ್ತು ಗೋವುಗಳ ಅಕ್ರಮ ಸಾಗಾಣೆ ತಪ್ಪಿಸುವುದು ಸರಕಾರದ ಉದ್ದೇಶ. ವಿಧೇಯಕದ ಮುಖ್ಯಾಂಶಗಳ ಪ್ರಕಾರ ಗೋವು ಸಾಗಾಣೆ ಶಿಕ್ಷಾರ್ಹ. ಆರೋಪಿಗಳಿಗೆ ಒಂದು ವರ್ಷದಿಂದ ಏಳು ವರ್ಷದವರೆಗೆ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ. ಜತೆಗೆ ಮೊದಲ ಅಪರಾಧಕ್ಕೆ 25ಸಾವಿರ ಗಳಿಂದ 50ಸಾವಿರ ವರೆಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.

ಕೃಷಿ ಮತ್ತು ಹೈನುಗಾರಿಕೆ ಉದ್ದೇಶಕ್ಕೆ ಗೋವುಗಳನ್ನು ಸಾಗಿಸಲು ಯಾವುದೇ ಅಡ್ಡಿಯಲ್ಲ. ಆದರೆ ಅದಕ್ಕೆ ತಹಸಿಲ್ದಾರ್ ಅಥವಾ ಉಪ ವಿಭಾಗಾಧಿಕಾರಿಯಿಂದ ಅನುಮತಿ ಪಡೆಯಬೇಕು. ವಿಧೇಯಕದಲ್ಲಿ ಗೋ ಹತ್ಯೆ ಕಸಾಯಿ ಖಾನೆಗೆ ಜಾನುವಾರು ಮಾರಾಟ ಮಾಡುವುದನ್ನು ಸಂಪೂರ್ಣ ನಿಷೇದಿಸಲಾಗಿದೆ ಎಂದು ಆಚಾರ್ಯ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X