ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿ ಪ್ರಯುಕ್ತ " ರ‌್ಯಾಪ್ಸೋ ಡಿ ಪರ್ ಜೈಗಾಂಟಿ "

By Mahesh
|
Google Oneindia Kannada News

Rapsodia Per Giganti on Maha Shivaratri
ಬೆಂಗಳೂರು, ಫೆ.10: ಸ್ವಿಟ್ಜರ್‌ಲೆಂಡ್ ದೇಶದ ಟ್ರಿಕ್‌ಸ್ಟರ್ ಥಿಯೇಟರ್ ಕಲಾವಿದ ದಂಪತಿಗಳಾದ ಕ್ರಿಸ್ಟಿನಾ ಗಾಲ್ಬಿಯಾಟಿ ಮತ್ತ್ತು ಇಲಿಜಾಲುಗಿಂಬುಲ್ ಪ್ರದರ್ಶಿಸುವ "ರ‌್ಯಾಪ್ಸೋಡಿ ಪರ್ ಜೈಗಾಂಟಿ" ಕಾರ್ಯಕ್ರಮವು ಇದೇ ಮಹಾಶಿವರಾತ್ರಿಯಂದು ಶುಕ್ರವಾರ ಫೆ. 12ರ ಸಂಜೆ 6 ಗಂಟೆಗೆ ನೃಪತುಂಗ ರಸ್ತೆಯಲ್ಲಿರುವ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಏರ್ಪಾಡಾಗಿ ದೆ.

ರಾಜ್ಯ ಚಿತ್ರಕಲಾ ಪರಿಷತ್ತು, ವಾರ್ತಾ ಇಲಾಖೆ ಮತ್ತು ಬಾರ್(ಬೆಂಗಳೂರು ಆರ್ಟಿಸ್ಟ್ ರೆಸಿಡೆನ್ಸಿ) ಜಂಟಿಯಾಗಿ ಆಯೋಜಿಸಲಿರುವ ಈ ಕಾರ್ಯಕ್ರಮದಲ್ಲಿ ಮರಗಾಲು ಧರಿಸಿದ ಕಲಾವಿದರು ತೆರೆದ ವೇದಿಕೆಯಲ್ಲಿ ಜೋಡಿ ನೃತ್ಯ ಮಾಡುತ್ತಾರೆ. ಭೂತಕಾಲದಿಂದ ಬೃಹತ್ ಪಾತ್ರಗಳು ಸುಂದರ ಬಯಲಲ್ಲಿ ಗೋಚರಗೊಳ್ಳುತ್ತವೆ. ನೃತ್ಯ ಕತೆಗಳು, ಬಿಚ್ಚಿಕೊಳ್ಳುತ್ತಾ, ಮಿಳಿತಗೊಳ್ಳುತ್ತಾ ಸಾವು-ಪ್ರೇಮಗಳ ನಡುವಿನ ಅನಂತ ಪಥದಲ್ಲಿ ಸಾಗುತ್ತವೆ. ಯಾವುದೇ ಒಂದು ಕತೆ, ಸಂಗತಿಯ ಆರಂಭ ಅಂತ್ಯದ ಚೌಕಟ್ಟಿಗೆ ಸಿಲುಕದೆ ನಂಬಿಕೆ, ಕಾಲ್ಪನಿಕತೆಗಳ ಸುಂದರ ಕಲಾಲೋಕಕ್ಕೆ ಒಯ್ದು ಮನುಷ್ಯನ ಅಸ್ತಿತ್ವದ ಅಲ್ಪತೆಯನ್ನು ಮನಗಾಣಿಸುತ್ತದೆ.

ಇಟಲಿ-ಸ್ವಿಜರ್‌ಲ್ಯಾಂಡ್ ಗಡಿಯಿಂದ ಕೆಲವೇ ಕಿ.ಮಿ. ದೂರದ ನೋವಜಾನೋಗ್ರಾಮದಲ್ಲಿ ಈ ಕಲೆ ರೂಪುಗೊಂಡಿತು. ಇಟಲಿ, ಫ್ರಾನ್ಸ್, ಜರ್ಮನಿ, ಡೆನ್‌ಮಾರ್ಕ್, ಬೆಲ್ಜಿಯಂ, ಹಾಲೆಂಡ್, ಸೆರ್ಬಿಯಾ, ಟರ್ಕಿ, ಅರ್ಮೇನಿಯ, ಇಂಡಿಯಾ, ತೈವಾನ್, ಮೆಕ್ಸಿಕೋ, ಕೊಲಂಬಿಯಾ ಮತ್ತು ಇಕ್ವಿಡಾರ್ ದೇಶಗಳಲ್ಲಿ ಈ ಕಲೆ ಪ್ರದರ್ಶನಗೊಂಡಿದೆ. ಈ ಅದ್ಬುತ ಕಲಾಪ್ರದರ್ಶನಕ್ಕೆ ಪ್ರವೇಶ ಉಚಿತವಾಗಿದ್ದು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X